ಸುಳ್ಯ ರೋಟರಿ ವಿದ್ಯಾಸಂಸ್ಥೆ ವತಿಯಿಂದ ಸೇವಾಜೆ ಶಾಲೆಯಲ್ಲಿ ವನಮಹೋತ್ಸವ

0

ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಹಿರಿಯ ವಿದ್ಯಾರ್ಥಿಗಳ ಬಳಗ -ಜಾಗೃತಿ ಇದರ ಜಂಟಿ ಆಶ್ರಯದಲ್ಲಿ “ವನಮಹೋತ್ಸವ” ಕಾರ್ಯಕ್ರಮವನ್ನು ಜೂ.23 ರಂದು ದ.ಕ.ಜಿಲ್ಲೆ ದೇವಚಳ್ಳ ಗ್ರಾಮದ ಸೇವಾಜೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಚರಿಸಲಾಯಿತು.


ರೋಟರಿ ಪಿ ಯು ಕಾಲೇಜಿನ ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸೆಲರ್ ಹಾಗೂ ಗಣಕಶಾಸ್ತ್ರ ಉಪನ್ಯಾಸಕ ಹರ್ಷಿತ್ ಜಿ ಜೆ , ಉಪನ್ಯಾಸಕಿ ಶ್ರೀಮತಿ ಕೀರ್ತಿ ಕೆ ಮತ್ತು ಉಪನ್ಯಾಸಕಿ ಮೌಸಮಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಶಾರದ ಮತ್ತು ಇತರ ಶಿಕ್ಷಕ ವೃಂದದವರು, ರೆಡ್ ಕ್ರಾಸ್ ಘಟಕದ
ವಿದ್ಯಾರ್ಥಿ ಪ್ರತಿನಿಧಿಗಳಾದ ಅಶ್ವಿನಿ ಎಸ್ ಮತ್ತು ನಿಹಾರ್ ಕೆ ಬಿ ಹಾಗು ‘ಜಾಗೃತಿ’ ಬಳಗದ ಸದಸ್ಯರುಗಳಾದ ಕೌಶಿಕ್ ರೈ ಮತ್ತು ಶ್ರವಣ್ ಶೇಡಿಕಜೆ ಉಪಸ್ಥಿತರಿದ್ದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಯ ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಾಂತಪ್ಪ ರೈ ಅಂಗಡಿಮಜಲು ವಂದಿಸಿದರು.