ಕಲ್ಮಕಾರು ಶಾಲೆಗೆ ಕಂಪ್ಯೂಟರ್, ಕ್ರೀಡಾ ಉಪಕರಣಗಳ ಬೇಡಿಕೆ

0

ಕೊಲ್ಲಮೊಗ್ರು ಗ್ರಾ. ಪಂ ವ್ಯಾಪ್ತಿಯ ಕಲ್ಮಕ್ಕಾರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, 1957ರಲ್ಲಿ ಆರಂಭವಾಗಿದ್ದು 56 ವರ್ಷಗಳನ್ನು ಪೂರೈಸಿದೆ. ಒಂದರಿಂದ ಏಳನೇ ತರಗತಿ ತನಕ ಇಲ್ಲಿ ಒಟ್ಟಾಗಿ 75 ವಿದ್ಯಾರ್ಥಿಗಳಿದ್ದು ತೀರಾ ಗ್ರಾಮೀಣ ಪ್ರದೇಶದಲ್ಲಿ ಇರುವ ಶಾಲೆಯಿದು. ಸುಳ್ಯ ಕೇಂದ್ರ ಸ್ಥಾನದಿಂದ ಸುಮಾರು 55 ಕಿ.ಮೀ ಗೂ ದೂರ ಇರುವ ಶಾಲೆಯಿದು. ಈ ಶಾಲೆಯ ಪ್ರಮುಖ ಭೇಡಿಕೆ ಸರ್ಕಾರದ ನಿಯಮದಂತೆ ಇಲ್ಲಿ 5 ಶಿಕ್ಷಕರಿರ ಬೇಕಿತ್ತು. ಅದರಲ್ಲಿ 4 ನಷ್ಟೆ ಪೂರೈಸಿದೆ. ಇಲ್ಲಿ ಪ್ರಮುಖವಾಗಿ ಕಂಪ್ಯೂಟರ್ ಶಿಕ್ಷಣಕ್ಕೆ ಕಂಪ್ಯೂಟರ್‌ ವ್ಯವಸ್ಥೆ, ಪ್ರೊಜೆಕ್ಟರ್ ಬೇಡಿಕೆ ಇದೆ. ಇದಲ್ಲದೆ ಕ್ರೀಡಾ ಕೊಠಡಿ, ಕ್ರೀಡಾ ಉಪಕರಣ, ಶಾಲಾ ಮಕ್ಕಳಿಗೆ ಸಮವಸ್ತ್ರದ ವ್ಯವಸ್ಥೆ ಆಗಬೇಕಾಗಿದ್ದು ಇದನ್ನು ಸರ್ಕಾರ ಅಥವಾ ದಾನಿಗಳು ಮುಂದೆ ಬಂದು ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳಲಾಗಿದೆ.