ಸ್ನೇಹದಲ್ಲಿ ವಿದ್ಯಾರ್ಥಿ ಸಂಸತ್ತಿನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ರಂದು 2023 24ನೇ ಸಾಲಿನ ವಿದ್ಯಾರ್ಥಿ ಜೂ.22ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಜೂ.15ರಂದು ವಿದ್ಯಾರ್ಥಿ ಸಂಸತ್ತಿಗೆ ನಡೆದಿದ್ದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದ ನಾಯಕನಾಗಿ ಪ್ರಜತ್ ಡಿ.ಎಸ್ (10ನೇ), ಉಪನಾಯಕನಾಗಿ ಆದಿತ್ಯ ಎಂ (9ನೇ) ಆಯ್ಕೆಯಾಗಿದ್ದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಯಕನಾಗಿ ಅಪ್ರಮೇಯ ಆರ್ ಯು 7ನೇ ಆಯ್ಕೆಯಾಗಿದ್ದನು. ಉಪನಾಯಕನಾಗಿ ವೈಷ್ಣವ್ ಪಿ ಎನ್ 6ನೇ ತರಗತಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದನು.‌


ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಬಗ್ಗೆ ಮತ್ತು ಮಂತ್ರಿಗಳು ನಿರ್ವಹಿಸಬೇಕಾಗಿರುವ ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ನೂತನವಾಗಿ ಆಯ್ಕೆಯಾಗಿರುವ ಮಂತ್ರಿಗಳಿಗೆ ಭಗವಾನ್ ಸೂರ್ಯದೇವರ ಹೆಸರಿನಲ್ಲಿ ಹಾಗೂ ಜ್ಞಾನಜ್ಯೋತಿಯ ಹೆಸರಿನಲ್ಲಿ ಪ್ರಮಾಣವಚನವನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.