🔸 ದಿಲೀಪ್ ಬಾಬ್ಲುಬೆಟ್ಟು ರವರ ತಂಡ ಅಧಿಕಾರ ಸ್ವೀಕಾರ
🔸 ಲಯನ್ಸ್ ನಿಂದ ಸದೃಢ ಸಮಾಜ ನಿರ್ಮಾಣ : ಬಿ.ಎಂ ಭಾರತಿ
ಪಂಜ ಲಯನ್ಸ್ ಕ್ಲಬ್ ಇದರ ನೂತನ
ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.24 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.
ಪದಗ್ರಹಣ ಅಧಿಕಾರಿ ಮತ್ತು ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಬಿ ಎಂ ಭಾರತಿ ರವರು ಮಾತನಾಡಿ
“”ನಾವು ಗಳಿಸಿದ ಸಂಪತ್ತಿನಲ್ಲಿ ಒಂದಿಷ್ಟು ಸಮಾಜಕ್ಕೆ ನೀಡಿ , ನಿಸ್ವಾರ್ಥ ಸೇವೆ ನೀಡಲೆಂದಿರುವ
ಸಂಸ್ಥೆ ಲಯನ್ಸ್. ಎಲ್ಲರೂ ಒಳ್ಳೆಯ ಕಾರ್ಯ ಸೇವೆಗಳನ್ನು ನೀಡುವ. ಈ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವ”. ಎಂದು ಅವರು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು .
ಪದಗ್ರಹಣ ಬಳಿಕ ನೂತನ
ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲನೆ
ಮಾಡಿದರು. ಈ ವೇಳೆ ದಿಲೀಪ್ ಬಾಬ್ಲುಬೆಟ್ಟು ಪತ್ನಿ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು.
ಸುಳ್ಯ ವೈ ಎಸ್ ಎಂ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಮುಖ್ಯ ಅತಿಥಿಯಾಗಿ
“ಪಂಜ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ರವರು ಯುವಜನ ಸಂಯುಕ್ತ ಮಂಡಳಿ, ಜೇಸಿ, ಯುವಕ ಮಂಡಲ, ಗ್ರಾಮ ಪಂಚಾಯತ್, ಸಹಕಾರ ಸಂಘ,ದೇವಾಲಯ ಹೀಗೆ ವಿವಿಧ ಧಾರ್ಮಿಕ,ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ಬಂದವರು.ಮುಂದೆ ಲಯನ್ಸ್ ಸಂಸ್ಥೆಯ ಮೂಲಕ ಅವರ ತಂಡದಿಂದ ಇನ್ನಷ್ಟು ಸೇವೆ ಸಮಾಜಕ್ಕೆ ದೊರೆಯಲಿದೆ”.ಎಂದು ಶುಭ ಹಾರೈಸಿದರು.
ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ, ವಲಯಾಧ್ಯಕ್ಷ ಹಾಗೂ ಪಂಜ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧ್ಯಕ್ಷ ಕರುಣಾಕರ ಎಣ್ಣೆಮಜಲು,ನೂತನ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ , ಕೋಶಾಧ್ಯಕ್ಷ ಆನಂದ ಜಳಕದಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಬಿ.ಎಂ.ಭಾರತಿ ಯವರನ್ನು , ಅತಿಥಿ ದಿನೇಶ್ ಮಡಪ್ಪಾಡಿ ಯವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾಧವ ಗೌಡ ಜಾಕೆ, ಶ್ರೀಮತಿ ಲೀಲಾ ಮಾಧವ ಜಾಕೆ ಉಪಸ್ಥಿತರಿದ್ದರು.ಅಧಿಕಾರ ಹಸ್ತಾಂತರದ ವೇಳೆ ಪೂರ್ವ ರಾಜ್ಯಪಾಲ ಎಂ ಬಿ ಸದಾಶಿವ, ಪೂರ್ವ ಆರ್. ಸಿ ಧರ್ಮಪಾಲ ಗೌಡ ಕಮಿಲ ಉಪಸ್ಥಿತರಿದ್ದರು.
ಸೇವಾ ಕಾರ್ಯಗಳು: ಅನಾರೋಗ್ಯ ಪೀಡಿತ ಜಗನ್ನಾಥ ಎಂಬವರಿಗೆ ರೂ.5000, ವಾಸುದೇವ ಮೇಲ್ಪಾಡಿ ಮತ್ತು ಶ್ರೀಮತಿ ವಿಜಯಕುಮಾರಿ ದಂಪತಿಗಳ ಪ್ರಾಯೋಜಕತ್ವದಲ್ಲಿ ಭವ್ಯ ಎಂಬವರ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಸುಮಾರು ರೂ.5000 ಮೌಲ್ಯದ ಪರಿಕರಗಳನ್ನು ನೀಡಲಾಯಿತು.
ಜಿಲ್ಲೆಯಲ್ಲಿ ಸರಕಾರಿ ಪಿ.ಯು.ಕಾಲೇಜಿನಲ್ಲಿ ಶೇ.100 ಫಲಿತಾಂಶ ಗಳಿಸಿದ್ದು ಏಕೈಕ ಸರಕಾರಿ ಪಿ. ಯು ಕಾಲೇಜು ಪಂಜ ಆಗಿದ್ದು. ಇದರ ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚೀನಪ್ಪ ಕಾಣಿಕೆ ಯವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೆ ಅಭಿಜ್ಞಾ ಪಳಂಗಾಯ, ಹರ್ಷಿತ್ ಎಣ್ಣಿಮಜಲು , ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಹನಿ ಜಾಕೆ
ರವರನ್ನು ಗೌರವಿಸಲಾಯಿತು. ಇದೇ ವೇಳೆ ನಿಯೋಜಿತ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು
ಜಿಲ್ಲಾ ಪ್ರಥಮ ಉಪ ರಾಜ್ಯಪಾಲೆ ಬಿ ಎಂ ಭಾರತಿ ರವರು ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಸೀತಾರಾಮ ಕುದ್ವ ವೇದಿಕೆಗೆ ಆಹ್ವಾನಿಸಿದರು. ಆಧ್ಯಾ ಬಾಬ್ಲುಬೆಟ್ಟು ಮತ್ತು ಆರಾಧನಾ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಪುರುಷೋತ್ತಮ ದಂಬೆಕೋಡಿ ಸ್ವಾಗತಿಸಿದರು.
ಮೋಹನ್ ದಾಸ್ ಕೂಟಾಜೆ ಲಯನ್ಸ್ ಪ್ರಾರ್ಥನೆ ಮಾಡಿದರು.ಮೋಹನ್ ಎಣ್ಮೂರು ಲಯನ್ಸ್ ಧ್ವಜ ವಂದನೆ ಸಲ್ಲಿಸಿದರು.
ತುಕರಾಮ್ ಏನೆಕಲ್ಲು, ಶಶಿಧರ ಪಳಂಗಾಯ, ಪುರಂದರ ಪನ್ಯಾಡಿ , ರಾಜೇಶ್ ರೈ , ಕರುಣಾಕರ ಎಣ್ಣೆಮಜಲು ಅತಿಥಿಗಳ,ಪದಾಧಿಕಾರಿಗಳ ಸಭೆಗೆ ಪರಿಚಯಿಸಿದರು. ವಾಸುದೇವ ಮೇಲ್ಪಾಡಿ ವಂದಿಸಿದರು.