Home ಧಾರ್ಮಿಕ ಜೂ.27-28: ನಿಡ್ವಾಳ ಶ್ರೀ ಮಹಾವಿಷ್ಣು ದೇವಳದಲ್ಲಿ -ಷಡಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ

ಜೂ.27-28: ನಿಡ್ವಾಳ ಶ್ರೀ ಮಹಾವಿಷ್ಣು ದೇವಳದಲ್ಲಿ -ಷಡಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ

0

ಎಣ್ಮೂರು -ಐವತ್ತೊಕ್ಲು ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ದೇವಳದ ಷಡಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ಜೂ.27 ಮತ್ತು ಜೂ.28 ರಂದು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಜೂ.27ರಂದು ಸಂಜೆ 5.30 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯ ಹವಾಚನ ,ಸ್ಥಳ ಶುದ್ದಿ, ವಾಸ್ತು ಪೂಜೆ, ಷಡಾಧಾರಗಳ ಅಧಿವಾಸ , ಪ್ರಸಾದ ವಿತರಣೆ ಜರುಗಲಿದೆ.

ಜೂ.28 ರಂದು ಬೆಳಿಗ್ಗೆ ಗಂಟೆ 7 ರಿಂದ ಮಹಾಗಣಪತಿ ಹೋಮ, ಬೆಳಿಗ್ಗೆ ಗಂಟೆ 10.20 ರಿಂದ 11.40 ತನಕ ನಡೆಯುವ ಸಿಂಹ‌ ಲಗ್ನದ ಶುಭ ಮುಹೂರ್ತದಲ್ಲಿ ಆಧಾರ‌ಶಿಲಾ ಪ್ರತಿಷ್ಠೆ,ನಿಧಿ ಕುಂಭ ಪ್ರತಿಷ್ಠೆ, ಷಡಾಧಾರ ಪ್ರತಿಷ್ಠೆ , ಪ್ರಸಾದ ವಿತರಣೆ ನಡೆಯಲಿದೆ.ಸಂಜೆ ಗಂಟೆ 5 ರಿಂದ ಸ್ವಸ್ತಿ ಪುಣ್ಯ ಹವಾಚನ, ಸ್ಥಳ ಶುದ್ದಿ , ಗರ್ಭನ್ಯಾಸ ಹೋಮ, ಇಷ್ಟಕಾನ್ಯಾಸ,ಗರ್ಭನ್ಯಾಸ ಜರುಗಲಿದೆ. ನಿಧಿ ಕುಂಭಕ್ಕೆ ಸಮರ್ಪಿಸಲು ನವರತ್ನ,ಚಿನ್ನ, ಬೆಳ್ಳಿ ಇತ್ಯಾದಿಗಳನ್ನು ಸ್ವೀಕರಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

error: Content is protected !!
Breaking