ಸುಳ್ಯ- ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್ ಸಂಚಾರ ಪ್ರಾರಂಭಗೊಳ್ಳಲಿದೆ. ಪಾಣತ್ತೂರು ಬಡ್ಡಡ್ಕ ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಬೆಳಗ್ಗೆ ಒಂದು ಬಸ್ ಮಾತ್ರ ಸರ್ವಿಸ್ ನಡೆಸುತ್ತಿದೆ. ಇನ್ನೂ ಮುಂದೆ ಹೆಚ್ಚುವರಿಯಾಗಿ ಸಂಜೆ ಗಂಟೆ 3.10 ಕ್ಕೆ ಪಾಣತ್ತೂರಿನಿಂದ ಹೊರಟು 4.10 ಕ್ಕೆ ಸುಳ್ಯಕ್ಕೆ ಬಂದು 4.35 ಕ್ಕೆ ಸುಳ್ಯದಿಂದ ಹೊರಟು 5.35 ಕ್ಕೆ ಪಾಣತ್ತೂರಿಗೆ ತಲುಪಲಿದೆ.