Home ಪ್ರಚಲಿತ ಸುದ್ದಿ ಎಸ್.ಕೆ.ಎಸ್.ಎಸ್.ಎಫ್. ಅಡ್ಕ ಇರುವಂಬಳ್ಳ ಶಾಖೆ‌ ವತಿಯಿಂದ ‌ಸಮಸ್ತ ಸ್ಥಾಪಕ ದಿನಾಚರಣೆ

ಎಸ್.ಕೆ.ಎಸ್.ಎಸ್.ಎಫ್. ಅಡ್ಕ ಇರುವಂಬಳ್ಳ ಶಾಖೆ‌ ವತಿಯಿಂದ ‌ಸಮಸ್ತ ಸ್ಥಾಪಕ ದಿನಾಚರಣೆ

0

ಎಸ್ ಕೆ ಎಸ್‌ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ವತಿಯಿಂದ ಸಮಸ್ತ 97 ನೇ ವಾರ್ಷಿಕ ಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ, ಪ್ರಾರ್ಥನೆ, ಸಿಹಿ ತಿಂಡಿ ವಿತರಣೆ ನಡೆಯಿತು.


ಜಿ ಎಸ್ ಮಹಮ್ಮದ್ ಮದನಿ ಉಸ್ತಾದ್ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಸ್ತ ಕೆಂದ್ರೀಯ ಜಮ್ಯಹತುಲ್ ಉಲಮಾ ಸುಳ್ಯ ತಾಲೂಕು ಕಾರ್ಯದರ್ಶಿ ಅನ್ವರ್ ಅಲಿ ದಾರಿಮಿ ಉಸ್ತಾದ್ ಧ್ವಜಾರೋಹಣ ನೆರವೇರಿಸಿದರು.
ಝೈನಿಯಾ ಮೆನೇಜಿಂಗ್ ಡೈರೆಕ್ಟರ್ ಮುಯ್ಯದ್ದೀನ್ ಅನ್ಸಾರಿ ಉಸ್ತಾದ್ ಸಂದೇಶ ಪ್ರಭಾಷಣ ಮಾಡಿದರು.


ಕಾರ್ಯಕ್ರಮದಲ್ಲಿ ಸುಳ್ಯ ರೇಂಜ್ ಜಮ್ಯಹತುಲ್ ಮುಹಲ್ಲಿಂ ಕೋಶಾಧಿಕಾರಿ ಹಸೈನಾರ್ ದರ್ಮತಣ್ಣಿ, ಬದ್ರಿಯಾ ಜುಮಾ ಮಸೀದಿ ಇರುವಂಬಳ್ಳ ಪ್ರ ಕಾರ್ಯದರ್ಶಿ ಮಹಮ್ಮದ್ ತುಪ್ಪಕಲ್ಲು , ಅಲ್ ಅಮೀನ್ ಅಡ್ಕ ಅಧ್ಯಕ್ಷರಾದ ಮಹಮ್ಮದ್ ಕೆ ಎ , ಝೈನಿಯಾ ಕಾರ್ಯಾಧ್ಯಕ್ಷರಾದ ಆರಿಸ್ ಕಲ್ತಡ್ಕ, ಅಲ್ ಅಮೀನ್ ಗಲ್ಫ್ ಅಧ್ಯಕ್ಷರಾದ ಅಬೂಬಕ್ಕರ್ ಸಿ ಎಚ್, ಎಸ್ ಕೆ ಎಸ್‌ ಎಸ್ ಎಫ್ ಕಾರ್ಯದರ್ಶಿ ಸಿದ್ದೀಕ್ ಬೊವೀಕ್ಕಾನ, ಸಂಘಟನಾ ಕಾರ್ಯದರ್ಶಿ ಸಲೀಂ ಎಂ ಎ, ಅಬ್ಬಾಸ್ ಅಡ್ಕ, ಮಹಮ್ಮದ್ ಪುಳ್ಳಿಚ್ಚ, ಯಾಕುಬ್ ಜಿ ಎ, ಮಜೀದ್ , ಅಬ್ದುಲ್ ರಹಿಮಾನ್, ಸಿದ್ದೀಕ್ ಕೆ ಎಚ್, ಯೂಸುಫ್ ಅಡ್ಕ, ಶಮ್ಮಾಸ್ ಸೇರಿದಂತೆ ಹಲವಾರು ಸಮಸ್ತ ಪ್ರೇಮಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವು ಎಸ್ ಕೆ ಎಸ್‌ ಎಸ್ ಎಫ್ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದು ಝೈನಿಯಾ ಪ್ರ ಕಾರ್ಯದರ್ಶಿ ಮಹಮ್ಮದ್ ಶರೀಫ್ ಜಿ ಎಚ್ ಸ್ವಾಗತಿಸಿ, ಟ್ರೆಂಡ್ ಕಾರ್ಯದರ್ಶಿ ಕಾದರ್ ಕೆ ಎಂ ಅಡ್ಕ ವಂದಿಸಿ ನಿರೂಪಿಸಿದರು.

NO COMMENTS

error: Content is protected !!
Breaking