ಸರ್ವೆ ನಡೆದ ಬಳಿಕವೇ ನಿರ್ಧಾರ : ತಹಶೀಲ್ದಾರ್
ಸುಳ್ಯ ವಿವೇಕಾನಂದ ಸರ್ಕಲ್ ಬಳಿ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದವರು ಇದೀಗ ನಮ್ಮಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆಂದು ತಹಶೀಲ್ದಾರ್ ರಿಗೆ ದೂರಿಕೊಂಡು ಗೂಡಂಗಡಿ ತೆರವಿಗೆ ಆಗ್ರಹಿಸಿದ ಹಾಗೂ ಸರ್ವೆ ನಡೆಸಿದ ಬಳಿಕವೇ ಈ ಕುರಿತು ನಿರ್ಧರಿಸುವುದಾಗಿ ತಹಶೀಲ್ದಾರ್ ಸೂಚನೆ ನೀಡಿದ ಘಟನೆ ನಡೆದಿದೆ.
ಸುಳ್ಯ ವಿವೇಕಾನಂದ ಸರ್ಕಲ್ ಬಳಿ ರವಿ ಎಂಬವರು ಕೆಲ ಸಮಯದಿಂದ ಬೀದಿಬದಿ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಅವರು ರಸ್ತೆ ಬದಿಯಿಂದ ಸ್ವಲ್ಪ ಒಳಗೆ ತಮ್ಮ ಅಂಗಡಿಯನ್ನು ಸ್ಥಳಾಂತರ ಮಾಡಿದರು. ಇದಾಗುತ್ತಿದ್ದಂತೆ ಸ್ಥಳೀಯ ಜಾಗದ ಮಾಲಕ ಕೆ.ಹೆಚ್.ಅಹ್ಮದ್ ಎಂಬವರು ಆಕ್ಷೇಪ ವ್ಯಕ್ತ ನಮ್ಮಜಾಗ ಅತಿಕ್ರಮಿಸಿದ್ದಾರೆಂದು ಆರೋಪಿಸಿ ದೂರಿಕೊಂಡರು.
ಇಂದು ಸ್ಥಳ ಪರಿಶೀಲನೆ ಗೆ ತಹಶೀಲ್ದಾರ್ ಮಂಜುನಾಥ್ ಹಾಗೂ ಅವರ ತಂಡ ಬಂದಾಗ ದೂರುನೀಡಿರುವ ಅಹ್ಮದ್ ರು ಅಂಗಡಿ ಈಗಲೇ ತೆರವು ಮಾಡುವಂತೆ ಒತ್ತಾಯ ಮಾಡಿದಾಗ,ಸರ್ವೆ ನಡೆಸದೇ ಯಾವುದೇ ನಿರ್ಧಾರಕ್ಕೆ ಬರಲಾರೆ. ನನಗೆ ನಾಳೆಸಂಜೆ ವರೆಗೆ ಸಮಯ ಬೇಕು ಸರ್ವೆ ನಡೆಸಿ ಜಾಗ ಯಾರಿಗೆ ಸೇರಿದ್ದೆಂದು ನೋಡಿಕೊಂಡು ಕ್ರಮಕೈಗೊಳ್ಳುವುದಾಗಿ ಹೇಳಿದರು.
ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಆರ್. ಐ. ಕೊರಗಪ್ಪ ಹೆಗ್ಡೆ, ವಿ.ಎ. ತಿಪ್ಪೇಶಪ್ಪ, ತಾಲೂಕು ಸರ್ವೆಯರ್ ಜಗದೀಶ್, ನ.ಪಂ. ಸದಸ್ಯೆ ಶೀಲಾ ಕುರುಂಜಿ ಸಹಿತ ಹಲವರು ಸ್ಥಳದಲ್ಲಿದ್ದರು.