Home ಚಿತ್ರವರದಿ ಪುಣ್ಚತ್ತಾರು : ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್

ಪುಣ್ಚತ್ತಾರು : ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್

0

ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ನೂತನ ಆಡಳಿತ ಮಂಡಳಿ ರಚನೆಯು ಜೂ 25ರಂದು ನಡೆಯಿತು.
ಡಾ. ದೇವಿ ಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿ ಬ್ರಹ್ಮಕಲಶೋತ್ಸವದ ಲೆಕ್ಕ ಪತ್ರ ಮಂಡನೆ ಮಾಡಿದರು. ದಿನೇಶ್ ಮಾಳ ಪ್ರಾಸ್ತಾವಿಕ ಗೈದರು.

ನೂತನ ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್, ಉಪಾಧ್ಯಕ್ಷರಾಗಿ ವೆಂಕಟರಮಣ ಆಚಾರ್ಯ ಹಾಗೂ ಶೇಷಪ್ಪ ಗೌಡ ಬೆದ್ರಂಗಳ, ಕಾರ್ಯದರ್ಶಿಯಾಗಿ ಮೋನಪ್ಪ ಬಂಡಾಜೆ, ಜೊತೆ ಕಾರ್ಯದರ್ಶಿಯಾಗಿ ಮಿಥುನ್ ಪೈಕ, ಸದಸ್ಯರಾಗಿ ಶ್ರೀ ಜನಾರ್ಧನ ಆಚಾರ್ಯ, ಕೃಷ್ಣ ಆಚಾರ್ಯ, ಸಂಜೀವ ರೈ ಪೈಕ, ಕುಮಾರ ಆಚಾರ್ಯ ದೋಲ್ಪಾಡಿ ರವರನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ವೆಂಕಟ್ರಮಣ ಆಚಾರ್ಯ, ಜನಾರ್ಧನ ಆಚಾರ್ಯ, ಕೃಷ್ಣ ಆಚಾರ್ಯ, ಬೀರ್ನೇಳು ದುರ್ಗಾಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಶಾಂತ್ ಮುರುಳ್ಯ, ಪ್ರದೀಪ್ ಬೊಬ್ಬೇಕೆರಿ, ಕುಮಾರ್ ಆಚಾರ್ಯ ದೋಲ್ಪಾಡಿ ಉಪಸ್ಥಿತರಿದ್ದರು.
ಶೇಷಪ್ಪ ಗೌಡ ಬೆದ್ರಂಗಳ ಸ್ವಾಗತಿಸಿ, ಬಾಲಕೃಷ್ಣ ರೈ ಕಾಸ್ಟಡಿಗುತ್ತು ವಂದಿಸಿದರು.

NO COMMENTS

error: Content is protected !!
Breaking