ತ್ಯಾಗ , ಬಲಿದಾನ ಪ್ರತೀಕ ವಾಗಿ ಆಚರಿಸುವ ಈದ್ ಉಲ್ ಅಲ್ ಹಾ ( ಬಕ್ರೀದ್) ಹಬ್ಬವನ್ನು ಬೆಳ್ಳಾರೆ ಮಸೀದಿಯಲ್ಲಿ ಈದ್ ನಮಾಝ್ ನೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಪ್ರಾರ್ಥನೆಗೆ ಹಾಗೂ ನಮಾಝಿಗೆ ನೇತೃತ್ವ ನೀಡಿದ ಬಳಿಕ ಖತೀಬರಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ಯವರು ತಮ್ಮ ಭಾಷಣದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಲು ಕರೆಕೊಟ್ಟರು. ತಂದೆ ತಾಯಿ, ಕುಟುಂಬದ ಸದಸ್ಯರು ಸೇರಿದಂತೆ ಜಮಾತಿಗರು ಊರಿನ ಇತರ ಧರ್ಮೀಯರೊಂದಿಗೆ ಐಕ್ಯತೆಯಿಂದ, ಸೌಹಾರ್ದ ತೆಯೊಂದಿಗೆ ಬಾಳಲು ಪ್ರತಿಯೊಬ್ಬರು ಕಟಿಬದ್ದರಾಗಬೇಕೆಂದು ಕರೆ ನೀಡಿದರು.
ಈದ್ ದಿನದ ಸಂಭ್ರಮದ ಸಮಯದಲ್ಲಿ ವಾಹನಗಳಲ್ಲಿ ಸಂಚರಿಸುವ ಸಮಯದಲ್ಲಿ ಬಹಳ ಜಾಗೂರುಕರಾಗಬೇಕೆಂದು ಪ್ರತ್ಯೇಕವಾಗಿ ಯುವಕರಿಗೆ ಕಿವಿಮಾತು ಹೇಳಿದರು.
ನಂತರ ಸೇರಿದವರೆಲ್ಲರೂ ಪರಸ್ಪರ ಆಲಿಂಗನ ಮಾಡಿಕೊಂಡರು ಹಾಗೂ ಜಮಾಅತಿನ ಸರ್ವರೂ ಭಾಗಿಯಾಗಿದ್ದರು ಬಳಿಕ ದರ್ಗಾ ಝಿಯಾರತಿನೊಂದಿಗೆ ಕೊನೆಗೊಂಡಿತು.