ಕೆಸರುಮಯವಾದ ಕಲ್ಮಡ್ಕ- ಜೋಗಿಬೆಟ್ಟು ರಸ್ತೆ

ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

0

ಕಲ್ಮಡ್ಕ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕೆಸರುಮಯವಾದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜು. 2ರಂದು ನಡೆದಿದೆ.


ಕಲ್ಮಡ್ಕ ರಬ್ಬರ್ ಫ್ಯಾಕ್ಟರಿ ಬಳಿಯಿಂದ ಜೋಗಿಬೆಟ್ಟು ಭಾಗಕ್ಕೆ ಸಂಚರಿಸುವ ರಸ್ತೆಯು ಜೋಗಿಬೆಟ್ಟು ಎಂಬಲ್ಲಿ ತೀರಾ ಹದಗೆಟ್ಟಿದ್ದು, ನಡೆದುಕೊಂಡು ಹೋಗುವುದೇ ಕಷ್ಟಕರವಾಗಿದೆ. ಸುಮಾರು ವರ್ಷಗಳ ಹಿಂದೆ ರಚನೆಯಾದ ಈ ರಸ್ತೆ ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸಿದರೂ, ಈ ರಸ್ತೆ ಅಭಿವೃದ್ಧಿ ಕಂಡಿಲ್ಲ. ಈ ಹಿಂದೆ ಶಶಿಕಲಾ ಎಂಬವರು ಪಂಚಾಯತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಈ ರಸ್ತೆಗೆ ಜಲ್ಲಿ ಹಾಕಲಾಗಿದೆ. ಆ ಬಳಿಕ ಇದುವರೆಗೂ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಂಡಿಲ್ಲ.

ಇದೀಗ ಆ ರಸ್ತೆಯ ಫಲಾನುಭವಿಗಳು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳ ಗಮನ ಇತ್ತ ಸರಿದು ರಸ್ತೆ ಅಭಿವೃದ್ಧಿಯಾಗಬಹುದೇ ಕಾದುನೋಡಬೇಕಿದೆ. ಪುನೀತ್ ಜೋಗಿಬೆಟ್ಟು, ವಿನೋದ್ ಜೋಗಿಬೆಟ್ಟು, ಹರೀಶ್ ಜೆ, ಸೋಮಪ್ಪ ಗೌಡ, ಕೃಷ್ಣಪ್ಪ ನಾಯ್ಕ, ಕರುಣಾಕರ, ಜಾನಕಿ ಜೆ, ಪುಷ್ಪಾ ಜೆ, ರಮ್ಯಾ ಜೆ.ಹೆಚ್, ಮಮತಾ, ಲಾವಣ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.