ಭಾರೀ ಮಳೆ : ಮಂಡೆಕೋಲು‌ ಬೊಳುಗಲ್ಲಿನಲ್ಲಿ‌ ಹೊಸ‌ ಮನೆಯ ಮೇಲೆ ಮಗುಚಿ ಬಿದ್ದ ಬೃಹತ್ ಮರ

0

ಮನೆ, ಕೊಟ್ಟಿಗೆ ಸಂಪೂರ್ಣ‌ ಜಖಂ

ಭಾರೀ ಮಳೆಗೆ ಮಂಡೆಕೊಲು ಗ್ರಾಮದ ಬೊಳುಗಲ್ಲಿನಲ್ಲಿ ಹೊಸ ಮನೆ ಮೇಲೆ ಮರವೊಂದು ಮಗುಚಿ‌ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.

ಬೊಳುಗಲ್ಲು‌ ಬಾಲಚಂದ್ರ ಎಂಬವರ ಮನೆ ಮೇಲೆ ಮರ ಬಿದ್ದು ಅವಘಡ ಸಂಭವಿಸಿದೆ.

ಕಳೆದೆರಡು ದಿನದಿಂದ ಮಂಡೆಕೋಲು ಭಾಗದಲ್ಲಿ ಎಡೆ ಬಿಡದೆ ಮಳೆ ಬರುತ್ತಿದೆ. ಜು.5 ರಂದು‌ ಬೆಳಗ್ಗೆ ಸುಮಾರು‌10.30 ರ ವೇಳೆಗೆ ಮಳೆಯೊಂದಿಗೆ ಜೋರಾಗಿ ಗಾಳಿಯು‌ ಬೀಸುತ್ತಿತ್ತು. ಪರಿಣಾಮ ಬಾಲಚಂದ್ರರ ಮನೆಯ ಸುಮಾರು 25 ಮೀಟರ್ ಅಂತರದಲ್ಲಿ ಇದ್ದು ಬೃಹತ್ ಗಾತ್ರದ ಬೀಟೆ ಮರ ಬುಡ ಸಮೇತ‌ ಮಗುಚಿ‌ ಮನೆ ಮೇಲೆ ಬಿದ್ದಿದೆ. ಈ ವೇಳೆ ಬಾಲಚಂದ್ರರು‌ ಮನೆಯೊಳಗಿದ್ದು ಶಬ್ದ ಕೇಳಿ ಹಿಂಬದಿಯಿಂದಾಗಿ ಹೊರಗೆ ಬಂದಿದ್ದಾರೆ. ಅವರ ಮೇಲೆ ಹಂಚು ಹುಡಿಯಾಗಿ ಬಿದ್ದಿದೆ.‌ ಏನೂ ಗಾಯಗಳಾಗಿಲ್ಲ.

ಹೊಸ ಮನೆ :

ಬಾಲಚಂದ್ರರು ಎರಡು ವರ್ಷದ ಹಿಂದೆ ಹೊಸ ಮನೆ ಕಟ್ಟಲು ಆರಂಭಿಸಿ ರಲ್ಲಿ ಇತ್ತೀಚೆಗೆ ಕೆಲಸ ಪೂರ್ಣಗೊಂಡಿತ್ತು. ಅದೇ ಮನೆಯಲ್ಲಿ ಅವರು ಮಲಗುತ್ತಿದ್ದರು. ಪಕ್ಕದ ಕೊಟ್ಟಗೆಯಲ್ಲಿ ಅಡುಗೆ ಮಾಡುತ್ತಿದ್ದರು. ದೊಡ್ಡ ಗಾತ್ರದ ಮರ ಬಿದ್ದುದರಿಂದ ಮನೆಯ ಜತೆಗೂ ಕೊಟ್ಟಿಗೆಯೂ ಜಖಂಗೊಂಡಿದೆ. ಮರ ಪೂರ್ತಿಯಾಗಿ‌ ಮನೆಯನ್ನು ಆವರಿಸಿಕೊಂಡಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯವರು, ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಘಟನೆಯ ವಿಷಯ ಜನರು ಸ್ಥಳದಲ್ಲಿ ಸೇರಿದ್ದರು.