ಪುತ್ತೂರು ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯಲ್ಲಿNRI HUID FESTಗೆ ಚಾಲನೆ

0

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ NRI HUID FEST ಗೆ ಜು.೮ರಂದು ಮಿಸ್ ಕರ್ನಾಟಕ ೨೦೨೨ ಪ್ರಶಸ್ತಿ ವಿಜೇತೆ ಮಾಡೆಲ್ ಕಿಂಜಲ್ ರವರು ಚಾಲನೆ ನೀಡಿದರು.

ಚಿನ್ನಾಭರಣ ಮಾರಾಟದಲ್ಲಿ ಹೆಚ್ ಯು ಐಡಿ ಹಾಲ್‌ಮಾರ್ಕಿಂಗ್ ಅನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿರುವ ನಿಟ್ಟಿನಲ್ಲಿ
ಪುತ್ತೂರಿನ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಎನ್ ಆರ್ ಐ ಎಕ್ಸ್‌ಚೇಂಜ್ ಫೆಸ್ಟ್ ನಡೆಸಲಾಗುತ್ತಿದೆ. ಒಂದು ತಿಂಗಳ ವರೆಗೆ ಈ ಪೆಸ್ಟ್ ನಡೆಯಲಿದ್ದು, ನಿಮ್ಮ ಹಳೆಯ ಚಿನ್ನದ ಆಭರಣಗಳನ್ನು ಹೆಚ್ ಯು ಐಡಿ ಚಿನ್ನಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಈ ವೇಳೆ ಪ್ರತಿ ಗ್ರಾಂಗೆ ರೂ.50 ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಪ್ರತಿ ಖರೀದಿ ಮೇಲೆ ಬೆಲೆಬಾಳುವ ಉಡುಗೊರೆಗಳನ್ನು ಸಂಸ್ಥೆ ನೀಡಲಿದೆ.

ಕಾರ್ಯಕ್ರಮದಲ್ಲಿ ಗ್ರಾಹಕರಾದ ರೋಹಿತ್ ಕಲ್ಲೇಗ, ಚೈತ್ರಾ ಕಲ್ಲೇಗ, ಕಾವ್ಯಾ ಮೊಟ್ಟೆತ್ತಡ್ಕ, ಸುಧಾ ಚಿಕ್ಕ ಮುಡ್ನೂರು ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಪುತ್ತೂರು ಶಾಖಾ ಮ್ಯಾನೇಜರ್ ರತೀಶ್ ಸಿ.ಪಿ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಹೆಚ್ ಯು ಐಡಿ ಕೋಡ್ ಅಂದರೆ…:
ಹೆಚ್ ಯು ಐಡಿ ಕೋಡ್ ಅಂದರೆ ಎಲ್ಲಾ ಚಿನ್ನದ ಆಭರಣಗಳ ಮೇಲೆ ಬಿಐಎಸ್ ಹಾಲ್ ಮಾರ್ಕಿಂಗ್ ಜೊತೆಗೆ, ಹಾಕಲಾಗುವ 6 ಅಂಕಿಗಳ ಆಲ್ಫಾನ್ಯೂಮರಿಕ್ ವಿಶಿಷ್ಟ ಗುರುತಿನ ಕೋಡ್ ಆಗಿದೆ.

ಹೆಚ್ ಯು ಐಡಿ ಏಕೆ ಬೇಕು?
ಹೆಚ್ ಯು ಐಡಿ ಕೋಡ್ ನೊಂದಿಗೆ, ಪ್ರತಿಯೊಬ್ಬರೂ ಚಿನ್ನದ ಆಭರಣಗಳ ಶುದ್ಧತೆ, ತೂಕ ಮತ್ತು ಮೂಲವನ್ನು ನೇರವಾಗಿ ತಿಳಿದುಕೊಳ್ಳಲು ಮತ್ತು ಗುರುತಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಫೆಸ್ಟ್ ವಿಶೇಷತೆಗಳು…

ಹಳೆಯ ಚಿನ್ನದ ಮೇಲೆ ಪ್ರತೀ ಗ್ರಾಂ ಗೆ ೫೦ರೂ ಹೆಚ್ಚುವರಿ
ವಜ್ರದ ಮೇಲೆ 20% ರಿಯಾಯಿತಿ
ಪ್ಲಾಟಿನಂ ಆಭರಣಗಳ ಮೇಲೆ 7 % ರಿಯಾಯಿತಿ
ಬೆಲೆಬಾಳುವ ಉಡುಗೊರೆಗಳು ಖಚಿತ