ಮರ್ಕಂಜ ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಜು.10(ಇಂದು)ರಂದು ಮರ್ಕಂಜ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರ ಬಿ. ಯವರು ವಹಿಸಿದ್ದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಕಾ ಅಧಿಕಾರಿ ಕೆ.ಎಂ. ರಮೇಶ ನೋಡೆಲ್ ಅಧಿಕಾರಿಯಾಗಿದ್ದರು.
ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ ಎಸ್. ವರದಿ ಮಂಡಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ವೇದಿಕೆಯಲ್ಲಿ ಉಪಾಧ್ಯಕ್ಷರಾದ ಗೋವಿಂದ ಅಳವುಪಾರೆ, ಸದಸ್ಯರಾದ ಚಿತ್ತರಂಜನ್ ಕೋಡಿ, ಯಶವಂತ ಸೂಟೆಗದ್ದೆ, ರಾಜೇಂದ್ರ ಕೊಚ್ಚಿ, ಶ್ರೀಮತಿ ಗೀತಾ ಹೊಸೊಳಿಕೆ, ಶ್ರೀಮತಿ ರಮತಾ ಕುದ್ಕುಳಿ, ಶ್ರೀಮತಿ ನಾಗವೇಣಿ ಶೆಟ್ಟಿಮಜಲು, ಶ್ರೀಮತಿ ಸಂಧ್ಯಾ ಸೇವಾಜೆ ಉಪಸ್ಥಿತರಿದ್ದರು.
ಸಭೆಯಲ್ಲಿ ವಿದ್ಯುತ್ ಸಮಸ್ಯೆ, ಅಕ್ರಮ ಸಕ್ರಮದ ಬಗ್ಗೆ, ದಾರಿ ಸಮಸ್ಯೆ, ರಸ್ತೆ, ನೀರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿ ಉತ್ತರ ಪಡೆದುಕೊಂಡರು.