ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಮಹಾಸಭೆ

0


ಸ್ನೇಹ ಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇದರ 2022- -23 ರ ಸಾಲಿನ ವಾರ್ಷಿಕ ಮಹಾಸಭೆಯು ಜುಲೈ 9 ರಂದು ಸ್ನೇಹಿತರ ಕಲಾಸಂಘ ಬೆಳ್ಳಾರೆ ಇದರ ಸಭಾಂಗಣದಲ್ಲಿ ಅಧ್ಯಕ್ಷೆ ಕುಸುಮ ಕುರುಂಬುಡೇಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸೌಮ್ಯ ಮೂಡಾಯಿತೋಟ ಸಭೆಗೆ ಮಂಡಿಸಿದರು. ವಾರ್ಷಿಕ ಜಮಾಖರ್ಚು ಲೆಕ್ಕಪತ್ರವನ್ನು ಕೋಶಾಧಿಕಾರಿ ಚೈತ್ರ ಕಲ್ಲೋಣಿ ಸಭೆಗೆ ಮಂಡಿಸಿದರು. ನಂತರ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಯಿತು. 2023 -24ರ ಸಾಲಿನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಸುಜಾತ ಚೀಮುಳ್ಳು, ಕಾರ್ಯದರ್ಶಿ ಪೂರ್ಣಿಮಾಉಮೇಶ್ ಪೆರುವಾಜೆ, ಕೋಶಾಧಿಕಾರಿ ಭಾರತಿ ಕೊಳಂಬಳ, ಉಪಾಧ್ಯಕ್ಷರು ಇಂದಿರಾ ಅಜಪಿಲ, ಜತೆ ಕಾರ್ಯದರ್ಶಿ ಸವಿತಾ ಪೈ ಬೆಳ್ಳಾರೆ, ನಿಕಟಪೂರ್ವ ಅಧ್ಯಕ್ಷರಾಗಿ ಕುಸುಮ ಕುರುಂಬುಡೇಲು ಕಾರ್ಯಕಾರಿ ಸಮಿತಿ ಸದಸ್ಯರು ಲೀಲಾವತಿ ಬೀಡು, ಸುಶೀಲ ಬಸ್ತಿಗುಡ್ಡೆ ,ಸುಧಾ ಬೀಡು ,ಮಮತಾ ತಡಗಜೆ,ಸೌಮ್ಯ ಮೂಡಾಯಿತೋಟ , ನಂದಿನಿ ಉಮಿಕ್ಕಲ, ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಚುನಾವಣಾಧಿಕಾರಿಯಾಗಿ ಪೂರ್ವಧ್ಯಕ್ಷೆ ಶೋಭನಾ ಪನ್ನೆ ನಿರ್ವಹಿಸಿದರು.ಶೋಭಾ ಕುರುಂಬುಡೇಲು ಸ್ವಾಗತಿಸಿ, ಸೌಮ್ಯ ಮೂಡಾಯಿತೋಟ ವಂದಿಸಿ, ಇಂದಿರಾ ಅಜಪಿಲ ಕಾರ್ಯಕ್ರಮ ನಿರೂಪಿಸಿದರು.