ಗುತ್ತಿಗಾರು ಸಹಕಾರಿ ಸಂಘದಿಂದ ದೇವಚಳ್ಳ ಗ್ರಾ.ಪಂ ಗೆ ಮೃತದೇಹ ಸುಡುವ ಪೆಟ್ಟಿಗೆ ಕೊಡುಗೆ

0

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ಗೆ ಇಂದು ಮೃತ ದೇಹ ಸುಡುವ ಪೆಟ್ಟಿಗೆ ಹಸ್ತಾಂತರಿಸಲಾಯಿತು.

ಗುತ್ತಿಗಾರು ಸಹಕಾರಿ ಸಂಘದ ಆವರಣದಲ್ಲಿ ಮೃತ ದೇಹ ಸುಡುವ ಬಾಕ್ಸ್ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷ ಕಿಶೋರ್ ಅಂಬೆಕಲ್ಲು, ಕಾರ್ಯ ನಿರ್ವಹಣಾಧಿಕಾರಿ ಶರತ್ ಎ.ಕೆ, ಸೊಸೈಟಿಯ ನಿರ್ದೇಶಕರು, ಸಿಬ್ಬಂದಿಗಳು, ದೇವಚಳ್ಳ ಗ್ರಾ.ಪಂ.ನ ಅಧ್ಯಕ್ಷೆ ಸುಲೋಚನ ದೇವ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.