ಇದು ಗದ್ದೆ ನಾಟಿ ಮಾಡುವ ಸಮಯ. ಸುಳ್ಯ ತಾಲೂಕಿನಲ್ಲಿ ಕೆಲವೊಂದು ಕಡೆ ಗದ್ದೆ ನಾಟಿ ಮಾಡಲಾಗುತ್ತಿದ್ದು ಪೆರುವಾಜೆಯಲ್ಲಿ ಅಧಿಕಾರಿಗಳು ಗದ್ದೆ ಗಿಳಿದು ಭತ್ತ ನಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪೆರುವಾಜೆಯ ಕೃಷಿಕ ಬಾಬು ಹೆಗಡೆಯವರು ತಮ್ಮ ಗದ್ದೆಯಲ್ಲಿ ಜು.11 ರಂದು ಭತ್ತ ನಾಟಿ ಮಾಡುತ್ತಿದ್ದರು.
ಪೆರುವಾಜೆ ಕ್ಷೇತ್ರ ವೀಕ್ಷಣೆಯಲ್ಲಿದ್ದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಉಪ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ, ಸುಳ್ಯ
ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಸುಳ್ಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ
ಕುಮಾರಿ ನಂದಿತಾರವರು, ಬಾಬು ಹೆಗಡೆಯವರು ಗದ್ದೆಗೆ ತೆರಳಿ ಭತ್ತ ನಾಟಿ ಕಾರ್ಯ ವೀಕ್ಷಣೆ ಮಾಡಿದರು. ಬಳಿಕ ಸ್ವತಃ ಅಧಿಕಾರಿಗಳೆಲ್ಲರೂ ಗದ್ದೆಗಿಳಿದು ಭತ್ತ ನಾಟಿಯಲ್ಲಿ ತೊಡಗಿಕೊಂಡರು.
ಕುಮಾರಿ ನಂದಿತಾರವರು, ಬಾಬು ಹೆಗಡೆಯವರು ಗದ್ದೆಗೆ ತೆರಳಿ ಭತ್ತ ನಾಟಿ ಕಾರ್ಯ ವೀಕ್ಷಣೆ ಮಾಡಿದರು. ಬಳಿಕ ಸ್ವತಃ ಅಧಿಕಾರಿಗಳೆಲ್ಲರೂ ಗದ್ದೆಗಿಳಿದು ಭತ್ತ ನಾಟಿಯಲ್ಲಿ ತೊಡಗಿಕೊಂಡರು.