ಸ.ಹಿ.ಪ್ರಾ.ಶಾಲೆ ಪೆರುವಾಜೆಯಲ್ಲಿ ನ್ಯಾಷನಲ್ ಡೇ ಆಚರಣೆ ನಡೆಯಿತು.
ಮಕ್ಕಳಲ್ಲಿ ತಮ್ಮ ದೇಶದ ಬಗ್ಗೆ ಪ್ರೀತಿ , ದೇಶದ ವೈವಿಧ್ಯತೆಯ ಬಗ್ಗೆ ಹಾಗೂ ಬೇರೆ ಬೇರೆ ರಾಜ್ಯಗಳ ಉಡುಗೆ ತೊಡುಗೆ, ಆಹಾರ ಪದ್ದತಿ, ಸಂಪ್ರದಾಯಗಳ ಬಗ್ಗೆ ಗೌರವ ಬೆಳೆಸುವ ಉದ್ದೇಶದಿಂದ ಜುಲೈ 11ರಂದು ನ್ಯಾಷನಲ್ ಡೇ ಆಚರಿಸಲಾಯಿತು.
ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳ ಉಡುಗೆ ತೊಟ್ಟು ಆ ರಾಜ್ಯದ ಬಗ್ಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್ , ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಕುಮಾರ್, ಉಪಾಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಉಮೇಶ್,ಅಡುಗೆ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.