ಆ.18ರೊಳಗೆ ಶರಣಾಗುವಂತೆ ನೋಟೀಸ್ : ಎರಡನೇ ಬಾರಿ ಎಚ್ಚರಿಕೆ
ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಇನ್ನೂ ಪತ್ತೆಯಾಗದೇ ತಲೆಮರೆಸಿಕೊಂಡಿರುವ ಆರೋಪಿಗಳ ಮನೆಗೆ ಜು.15 ರಂದು ಎನ್.ಐ.ಎ. ತಂಡ ಭೇಟಿ ಮಾಡಿ ಆ.18ರೊಳಗೆ ಶರಣಾಗಬೇಕು ಎನ್ನುವ ಎಚ್ಚರಿಕೆಯ ಸಂದೇಶದ ನೋಟೀಸನ್ನುಮನೆಯ ಗೋಡೆಯಲ್ಲಿ ಅಂಟಿಸಿರುವುದಾಗಿ ವರದಿಯಾಗಿದೆ.
ಇದು ಎರಡನೇ ಸೂಚನೆಯಾಗಿದ್ದು ಶರಣಾಗದಿದ್ದರೆ ಮುಂದಿನ ಕ್ರಮದ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಜೂ.30ರೊಳಗೆ ಶರಣಾಗಬೇಕು. ಇಲ್ಲದೇ ಹೋದಲ್ಲಿ ಅವರ ಮನೆಯನ್ನು ಜಪ್ತಿ ಮಾಡುವುದಾಗಿ ಎನ್‌ಐಎ ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ತಿಳಿಸಿದ್ದರು. ಆದರೆ ಇದುವರೆಗೆ ಪ್ರವೀಣ್ ನೆಟ್ಟಾರು ಹಂತಕರು ಶರಣಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಹಿಂದೆ ಎನ್‌ಐಎ ಅಧಿಕಾರಿಗಳು ಸುಳ್ಯ ನಗರದಲ್ಲಿ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಅನೌನ್ಸ್ ಮಾಡಿ, ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದರು.
ಆದರೆ ಇದುವರೆಗೂ ಆರೋಪಿಗಳು ಶರಣಾಗಿಲ್ಲ. ಜು.15ರಂದು ಆರೋಪಿಗಳ ಸುಳ್ಯ ಹಾಗು ಬೆಳ್ಳಾರೆಯ ಮನೆಗೆ ಹೋಗಿ ಆ.18 ರೊಳಗೆ ಶರಣಾಗತಿಯ ನೋಟೀಸ್ ಅಂಟಿಸಿ ಬಂದಿರುವುದಾಗಿ ತಿಳಿದುಬಂದಿದೆ.