ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದಕೊಡುಗೆ

0

ಕಲ್ಮಡ್ಕ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದವರು ದೇಣಿಗೆಯಾಗಿ ಕಂಪ್ಯೂಟರ್ ಮತ್ತು ಯು.ಪಿ. ಎಸ್ ಇತ್ಯಾದಿಯನ್ನು ನೀಡಿದ ಡಿಜಿಟಲೀಕರಣದ ಉದ್ಘಾಟನೆಯನ್ನು ಪಂಚಾಯತ್ ನ ಮಾಜಿ ಅಧ್ಯಕ್ಷ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ ಮಾಡಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತನ ಸದ್ಯಸರಾದ ಲೋಕೇಶ ಆಕ್ರಿಕಟ್ಟೆ,ಹರೀಶ್.ಎಂ, ಲೋಕಯ್ಯ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ ಕೆ , ಗ್ರಂಥಾಪಾಲಕಿ, ಪಂಚಾಯತ್ ಸಿಬ್ಬಂದಿಯಾದ ಶೇಷಪ್ಪ ಎ ವಿ , ಕಲ್ಮಡ್ಕ ಶಾಲಾಮುಖ್ಯ ಶಿಕ್ಷಕಿ, ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರು ಭಾಗವಹಿಸಿದ್ದರು.