ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಆಟಿಡೊಂಜಿ ದಿನ

0

ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಜು. 22 ರಂದು ಆಟಿಕೂಟ ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ವರ್ತಕ ಸಂಘದ ಅಧ್ಯಕ್ಷರಾದ ಸುಧಾಕರ ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತುಳುನಾಡಿನ ವಿಶೇಷ ಹಬ್ಬವಾದ ಆಟಿ ಬಗ್ಗೆ ಹಾಗೂ ತುಳುನಾಡಿನ ಸಂಸ್ಕೃತಿ ಯ ಬಗ್ಗೆ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು .
ಈ ಕಾರ್ಯಕ್ರಮದಲ್ಲಿ ಪೋಷಕರಿಗಾಗಿ ಚೆನ್ನಮಣೆ ಆಟವನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಎಲ್ಲಾ ಪೋಷಕರು ತಯಾರಿಸಿದ ಆಟಿಯ ವಿಶೇಷ ಖಾದ್ಯ ಗಳನ್ನು ಒಟ್ಟಾಗಿ ಕುಳಿತು ಸವಿದು ಸಂಭ್ರಮಿಸಿದರು. ಸಂಸ್ಥೆಯ ಪುಟಾಣಿ ಮಕ್ಕಳು ಆಟಿ ಕಳಂಜನ ನೃತ್ಯಕ್ಕೆ ಹೆಜ್ಜೆ ಹಾಕಿದರು . ಸಂಸ್ಥೆಯ ಪೋಷಕರಾದ ಶ್ವೇತ ಆಟಿಯ ಸಂದರ್ಭದಲ್ಲಿ ಬರುವಂತಹ ದೈವಗಳ ಬಗ್ಗೆ ಹಾಗೂ ಆಟಿಯ ವಿಶೇಷ ಖಾದ್ಯ ದಲ್ಲಿ ಇರುವ ಔಷಧಿ ಗುಣಗಳ ಬಗ್ಗೆ ಸವಿವರವಾಗಿ ತಿಳಿಸಿ ಕೊಟ್ಟರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ನಿರ್ಮಲ ಕಾರ್ಯಕ್ರಮವನ್ನು ನಿರೂಪಿಸಿದರು.