ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ “ಪೋಷಕರ ಸಭೆ”

0


ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಸಕ್ತ ವರ್ಷದ “ಪೋಷಕರ ಸಭೆ” ದಿನಾಂಕ ೨೨-೦೭-೨೦೨೩ರಂದು ಕಾಲೇಜಿನ ಅಡಿಟೋರಿಯಂನಲ್ಲಿ ನಡೆಸಲಾಯಿತು.


ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಡಾ. ಉಜ್ವಲ್ ಯು.ಜೆ.ಯವರು ಪ್ರಾಸ್ತಾವಿಕವಾಗಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ೨೦೨೨-೨೩ ಸಾಲಿನಲ್ಲಿ ಕಾಲೇಜಿನಲ್ಲಿ ಕೈಗೊಂಡ ಕಾರ್ಯಗಳನ್ನು ವಿವರಿಸುತ್ತಾ, ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಸ್ತುತ ವಿದ್ಯಮಾನಗಳ ಜೊತೆಗೆ ಕೈ ಜೋಡಿಸುವುದರ ಜೊತೆಗೆ ಅದಕ್ಕೆ ಹೊಂದಿಕೊಂಡು, ಬಳಸಿಕೊಂಡು ಮುಂದೆ ಹೋಗಬೇಕೆಂಬುದನ್ನು ಮನವರಿಕೆ ಮಾಡಿದರು. ಕಾಲೇಜಿನಲ್ಲಿ ಅಳವಡಿಸಿದ “ಪ್ರಿಪರೇಟರಿ ಎಕ್ಸಂ” ಮಾದರಿಯಿಂದಾಗಿ, ಮೊದಲನೇ ವರ್ಷದ ವಿದ್ಯಾರ್ಥಿಗಳ ಕಳೆದ ಸೆಮಿಸ್ಟರ್‌ನ ಫಲಿತಾಂಶವು, ಯುನಿರ್ವಸಿಟಿಯ ಒಟ್ಟಾರೆ ಫಲಿತಾಂಶದಿಂದ ಹೆಚ್ಚಾಗಿದ್ದು ಈ ವರ್ಷ ದಾಖಲೆಯ ೯೨% ಫಲಿತಾಂಶಕ್ಕಾಗಿ ಉಪನ್ಯಾಸಕವೃಂದ ಮತ್ತು ವಿದ್ಯಾರ್ಥಿವೃಂದವನ್ನು ಅಭಿನಂದಿಸಿದರು.

೧೦೦% ಪ್ಲೇಸ್ಮೆಂಟ್ ಎಂಬ ಧ್ಯೇಯವಾಕ್ಯದೊಂದಿಗೆ, ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ, ಮೂರನೇ ಸೆಮಿಸ್ಟರ್‌ನಲ್ಲಿಯೇ ಉದ್ಯೋಗ ತರಭೇತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ, ಅವರು ಸಕ್ರಿಯವಾಗಿ ಕಾರ್ಯಗಾರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು, ಅದಕ್ಕಾಗಿ ನುರಿತ ಅನುಭವವುಳ್ಳ, ಬೆಂಗಳೂರಿನ ೭ಣh Seಟಿse ಣಡಿಚಿiಟಿeಡಿs ನ್ನು ತೊಡಗಿಸಿಕೊಂಡಿರುವ ಬಗ್ಗೆ ವಿವರಿಸಿದರು. ನಂತರ ಪೋಷಕರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಆಲಿಸುವ ಮತ್ತು ಉತ್ತರಿಸುವ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಅಭಿವೃದ್ಧಿಗೆ ಬೇಕಾದ ಎಲ್ಲಾ ವಿಷಯಗಳನ್ನು ಚರ್ಚಿಸಲಾಯಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವರ್ಷದಲ್ಲಿ ಕ್ರಮಗಳ ಬಗ್ಗೆ ಪೋಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು, ಕಾಲೇಜಿನ ಆಗುಹೋಗುಗಳ ಬಗ್ಗೆ ಪೋಷಕರಲ್ಲಿ ತಿಳಿಹೇಳಿದರು ಮತ್ತು ಪೋಷಕರ ಸಹಕಾರವನ್ನು ಬಯಸಿದರು. ವಿದ್ಯಾರ್ಥಿಗಳಿಗೆ ಮೆಂಟರ್ ವ್ಯವಸ್ಥೆ – ಪ್ರತಿ ಟೆಸ್ಟ್‌ನ ಮಾರ್ಕ್‌ಶೀಟ್ ಮತ್ತು ಹಾಜರಾತಿ ರಿಪೋರ್ಟ್ ಕಳುಹಿಸುವ ವ್ಯವಸ್ಥೆ ಬಗ್ಗೆ ವಿವರಿಸಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕರಿಸಬೇಕೆಂದು ಕೋರಿದರು. ಕಳೆದ ಸಾಲಿನಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಈ ವರ್ಷದಲ್ಲಿ ಅಡ್ಮಿಷನ್ ಕಾರ್ಯಗಳು ಭರದಿಂದ ಸಾಗಿರುವ ಹಿನ್ನಲೆಯಲ್ಲಿ ಪೋಷಕರನ್ನು ತುಂಬು ಹೃದಯದಿಂದ ಅಭಿನಂದಿಸಿದರು.


ಕಾರ್ಯಕ್ರಮದ ಸಂಘಟನಕಾರರಾದ, ಕಾಲೇಜಿನ ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್.ರವರು ಸ್ವಾಗತಿಸಿದರು. First year Coordinator ಹಾಗೂ ರಸಾಯನ ಶಾಸ್ತ್ರ ಮುಖ್ಯಸ್ಥೆ ಡಾ. ಸುರೇಖಾ ಎಂ. ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.