ಕೆವಿಜಿ ಐಪಿಎಸ್ ನಲ್ಲಿ ‘ ಆಟಿಡೊಂಜಿ ದಿನ’

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು.22 ರಂದು ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.


ಈ ಕಾರ್ಯಕ್ರಮದಲ್ಲಿ ಶಾಲೆಯ ನೀಲಿ, ಹಳದಿ,ಕೆಂಪು ಮತ್ತು ಹಸಿರು ತಂಡದ ವಿದ್ಯಾರ್ಥಿಗಳು ಆಟಿಯ ವಿಶೇಷತೆಯ ಬಗ್ಗೆ ವಿವಿಧ ಅಭಿನಯದ ಮೂಲಕ ತಿಳಿಸಿದರು.ಬಳಿಕ ಆಟಿಯಲ್ಲಿ ಮಾಡುವ ವಿವಿಧ ತಿಂಡಿ ತಿನಿಸುಗಳನ್ನು ತಂದು , ಅವುಗಳನ್ನು ಆಟಿ ತಿಂಗಳಲ್ಲಿ ಮಾಡುವ ವಿಶೇಷತೆಯ ಕುರಿತು ವಿವರಿಸುತ್ತಾ, ಶಿಕ್ಷಕರಿಗೆ ವಿತರಿಸಿ ಮನರಂಜಿಸಿದರು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಆಟಿಯಲ್ಲಿ ತಿನ್ನುವ ತಿಂಡಿ ತಿನಿಸುಗಳ ಜೊತೆಗೆ ಆಟಿಯಲ್ಲಿ ಆಟಿ ಕೆಳೆಂಜ ಯಾಕೆ ಬರುತ್ತಾನೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಂಡರು.


ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.