ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಜು.21 ರಂದು ಭಾಗವಹಿಸಿದರು.
ಪರ್ವತಮುಖಿಯ ರಾಮಣ್ಣ ಅವರ ಉತ್ತ ಗದ್ದೆಯಲ್ಲಿ ನೇಜಿ ನಡುವ ಪ್ರಕ್ರಿಯೆ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ಭಾಗವಹಿಸಿದರು. ಹಿರಿಯರು ಹೇಳಿದ ಓ ಬೇಲೆ ಜನಪದ ಪದ್ಯವನ್ನು ಹಾಡುತ್ತಾ ವಿದ್ಯಾರ್ಥಿಗಳು ಭತ್ತ ನಾಟಿ ಮಾಡಿದರು.
ಕಾಲೇಜಿನ ಸುಮಾರು ೧೫೦ಕ್ಕೂ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಹಿರಿಯರಾದ ಮೋಂಟಿ ಅಮ್ಮ ಅವರು ನೇಜಿ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ನಾಟಿ ಮಾಡಲು ರಾಮಣ್ಣ ಅವರು ಸೇರಿದಂತೆ ಹಲವಾರು ಮಂದಿ ಸಹಕರಿಸಿ ನಾಟಿ ಕಾರ್ಯ ನೆರವೇರಿಸಿದರು.
ಪ್ರಾಚಾರ್ಯ ಸೋಮಶೇಮಶೇಖರ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ, ಮನೋಜ್ ಕುಮಾರ್ ಬಿ.ಎಸ್, ಸಿಬ್ಬಂದಿಗಳಾದ ಮೋಹನ್ ಮಠ, ಕೇಶವ ಆರ್ಯ, ಸವಿತಾ ಬಿಳಿನೆಲೆ ಸಹಕರಿಸಿದರು.