ಮಂಡೆಕೋಲು ಗುರುವಮೊಟ್ಟೆ ಡ್ರೈವರ್ ಅಬ್ದುಲ್ಲಾ ಅಲ್ಪಕಾಲದ ಅಸೌಖ್ಯದಿಂದ ಜು.23 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪುತ್ರರಾದ ಹಮೀದ್, ಇಬ್ರಾಹಿಂ, ಉಮ್ಮರ್ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.
ಇವರು ಅಜ್ಜಾವರ ಮಂಡೆಕೋಲು ಸರ್ವಿಸ್ ಜೀಪು ಚಾಲಕರಿಗೆ ಚಿರಪರಿಚಿತರಾಗಿದ್ದರು.