ಬೆಳ್ಳಾರೆ ಕೆ.ಪಿ.ಎಸ್.ಕಾಲೇಜಿನಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

0

ಬೆಳ್ಳಾರೆ ಕೆ.ಪಿ.ಎಸ್ ಕಾಲೇಜಿನಲ್ಲಿ ಮೆಂಡ ಫೌಂಡೇಷನ್ ಎಸ್. ಪಿ.ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಹಯೋಗದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಶಾಸಕಿ ಭಾಗೀರಥಿ ಮುರುಳ್ಯ ಜು.24 ರಂದು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ, ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್,ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ,
ಸೆಲ್ಕೋ ಲೈಟ್ ಪ್ರೈವೇಟ್ ಲಿಮಿಟೆಡ್ ಮೆನೇಜರ್ ಆಶಿಕ್, ಏರಿಯಾ ಮೆನೇಜರ್ ಪ್ರಸಾದ್ ಬಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ,ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ವಿಶ್ವನಾಥ ಗೌಡ. ,ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ ಹಾಗೂ ಶಿಕ್ಷಕರು,ಎಸ್.ಡಿ.ಎಂ.ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.