ಮರ ತೆರವುಗೊಳಿಸಲು ಮೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸಿದ ಸ್ಥಳೀಯರು
ಸುಳ್ಯ ನಗರದ ಜಟ್ಟಿಪಳ್ಳದ ಮೂಲಕ ಕಾಯರ್ತೋಡಿಯ ಸೂರ್ತಿಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರೀ ಗಾಳಿ – ಮಳೆಯಿಂದಾಗಿ ಬೃಹದಾಕಾರದ ಮರವೊಂದು ಬಿದ್ದು, ವಿದ್ಯುತ್ ಕಂಬ ಧರೆಗುರುಳಿದ ಘಟನೆ ಜು.24ರಂದು ಬೆಳಿಗ್ಗೆ ಸಂಭವಿಸಿದೆ.
ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೃಹದಾಕಾರದ ಮರವೊಂದು ಬುಡಮೇಲಾಗಿ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬ ತುಂಡಾಗಿದ್ದು, ವಿದ್ಯುತ್ ತಂತಿಗಳು ಧರೆಗರುಳಿತು.
ಇದರಿಂದಾಗಿ ಸುಮಾರು ಒಂದು ಘಂಟೆಗೂ ಅಧಿಕ ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಬಳಿಕ ಸ್ಥಳೀಯರಾದ ಕೌಶಿಕ್ ಜಟ್ಟಿಪಳ್ಳ, ಪ್ರಶಾಂತ್ ಆಚಾರ್ಯ ಕಾಯರ್ತೋಡಿ, ಜಗದೀಶ್ ಸೂರ್ತಿಲ, ಜಯರಾಮ ನಾಯಕ್ ಸೂರ್ತಿಲ, ದೀಪಕ್ ಕಾಯರ್ತೋಡಿ, ಗುತ್ತಿಗೆದಾರಾದ ವೆಂಕಟೇಶ, ಅವರು ಮೆಸ್ಕಾಂ ಸಿಬ್ಬಂದಿಗಳೊಂದಿಗೆ ರಸ್ತೆಯಿಂದ ಮರವನ್ನು ತೆರವುಗೊಳಿಸಲು ಸಹಕರಿಸಿದ್ದರು.