ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆರಂಭ

0

ಆ.2ರ ವರೆಗೆ ಖರೀದಿಸಲು‌ ಅವಕಾಶ : ಗಣಿತ ಕಲಿಕಾ ಮಾದರಿ ತಯಾರಿ ಹಾಗೂ ವೇದ ಗಣಿತದ ತರಬೇತಿ

ದೀಪ‌ಬುಕ್ ಹೌಸ್ ಪುತ್ತೂರು ಇದರ ಮಾಲಕ ಸತ್ಯಮೂರ್ತಿ‌ ಹೆಬ್ಬಾರ್ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಪ್ರಕಾಶ್ ಕೊಡೆಂಕಿರಿಯವರ ನೇತೃತ್ವದಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ‌ಪುಸ್ತಕ ಪ್ರದರ್ಶನ ಮತ್ತು ಮಾರಾಟ ಜು.26 ರಿಂದ ಆರಂಭಗೊಂಡಿದೆ. ಆ.2 ರ ತನಕ‌ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಜು.26ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ‌ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಿ, ಪುಸ್ತಕ ಓದಿದರೆ ಜ್ಞಾನ ವೃದ್ಧಿಯಾಗುತ್ತದೆ. ಆದ್ದರಿಂದ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು” ಎಂದು‌ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿ ಅಧ್ಯಕ್ಷ ಚಂದ್ರಶೇಖರ ಪೇರಾಲು ‌ಮಾತನಾಡಿ ಸಾಮಾಜಿಕ ಜಾಲತಾಣ ಪ್ರಭಾವದ ಈ ದಿನದಲ್ಲಿ ಪುಸ್ತಕ ಓದಿ ಎಂದು ಹೇಳುವ ಸಂದರ್ಭ ಬಂದಿದೆ. ಸಮಾಜದ ಸ್ವಾಸ್ಥ್ಯ ವೃದ್ಧಿ ಗೆ ಓದು‌ವುದು ಅತ್ಯವಶ್ಯ.‌ ಈ ಅವಕಾಶ ವನ್ನು ಎಲ್ಲರೂ ಉಪಯೋಗಿಸಿ ‌ಜ್ಞಾನ ವೃದ್ಧಿಸಲು ಅವಕಾಶ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲೆ ಸುಮಿತ್ರ, ಸುಳ್ಯ ನಗರ ಪಂಚಾಯತ್ ಸದಸ್ಯ ಸುಧಾಕರ ಕುರುಂಜಿಭಾಗ್, ಸುಳ್ಯ ಗಾಂಧಿನಗರ ಕೆಪಿಎಸ್ ವಿದ್ಯಾರ್ಥಿ ಸಂಸ್ಥೆ ಉಪಾಧ್ಯಕ್ಷ ‌ ಚಿದಾನಂದ ಕುದ್ಪಾಜೆ ಉಪಸ್ಥಿತರಿದ್ದರು.

ಮಳಿಕೆಯಲ್ಲಿ ಧಾರ್ಮಿಕ, ಪ್ರಸಿದ್ಧ ಸಾಹಿತಿಗಳ ಕೃತಿಗಳು, ಮಕ್ಕಳ ಕಥೆ, ಚಿತ್ರಕಲೆ ಇತ್ಯಾದಿ ಕೃತಿಗಳು ಇವೆ.

ಗಣಿತ ಕಲಿಕಾ ಮಾದರಿ ತಯಾರಿ ಹಾಗೂ ವೇದ ಗಣಿತದ ಉಚಿತ ತರಬೇತಿ ಪುಸ್ತಕ ಖರೀದಿಸಿದವರಿಗೆ ನೀಡಲಾಗುತ್ತದೆ