ಸುಳ್ಯದಲ್ಲಿ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ವತಿಯಿಂದ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ- ಶೇರು ಪ್ರಮಾಣ ಪತ್ರ ವಿತರಣೆ

0

ತೆಂಗು ಬಹುರಾಷ್ಟ್ರೀಯ ಬೆಳೆ- ತಂತ್ರಜ್ಞಾನದ ಸ್ಪರ್ಶದಿಂದ ತೆಂಗಿನ ಉತ್ಪನ್ನಗಳಿಗೆ ವಿದೇಶದಲ್ಲಿ ಬಹು ಬೇಡಿಕೆ ಇದೆ : ದಿವಾಕರ ವೈ

ಸಂಸ್ಥೆಯ ಯೋಜನೆ ರೈತರನ್ನು ತಲುಪುತ್ತಿದೆ.
14 ಸಾವಿರದಷ್ಟು ಸದಸ್ಯರನ್ನು ಹೊಂದಿರುವ ಸಂಸ್ಥೆ ತೆಂಗು ಬೆಳೆಗಾರರ ಉತ್ತೇಜನಕ್ಕೆ ಪೂರಕವಾಗಿದೆ. ತೆಂಗು ರೈತರು ಪಡುವ ಸಮಸ್ಯೆ ನಿವಾರಣೆಗೂ ಸಂಸ್ಥೆಯಿಂದ ಪರಿಹಾರದ ವ್ಯವಸ್ಥೆಯಾಗಲಿ- ನಿತ್ಯಾನಂದ ಮುಂಡೋಡಿ

ತೆಂಗು ಬೆಳೆಗಾರರು ಹಾಗೂ ಅಡಿಕೆ ಕೃಷಿಕರು ಪಡುತ್ತಿರುವ ಸಮಸ್ಯೆಗಳಿಗೆ ವಿಜ್ಞಾನಿಗಳು ಸಂಶೋಧನೆ ನಡೆಸಿ ಪರಿಹಾರದ ವ್ಯವಸ್ಥೆ ಕಲ್ಪಿಸುವಂತಾಗಲಿ -ಲೋಲಜಾಕ್ಷ ಭೂತಕಲ್ಲು

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ವತಿಯಿಂದ ತೆಂಗು ಕೃಷಿಕರಿಗೆ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಸಂಸ್ಥೆಯ ಸದಸ್ಯರಿಗೆ ಶೇರು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಜು.27 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಕುಸುಮಾಧರ ಕೆ.ಎಸ್ ರವರು ವಹಿಸಿದ್ದರು.
ಪ್ರಗತಿಪರ ಕೃಷಿಕ ಸಾಮಾಜಿಕ ಧುರೀಣ ನಿತ್ಯಾನಂದ ಮುಂಡೋಡಿ ಯವರು ದೀಪ ಪ್ರಜ್ವಲಿಸಿದರು‌.


ಸಂಪನ್ಮೂಲ ವ್ಯಕ್ತಿಯಾಗಿ ಕಿದುಬಿಳಿನೆಲೆಸಿ.ಪಿ.ಸಿ.ಆರ್.ಐ. ಸಂಶೋಧನಾ ಕೇಂದ್ರದ ವಿಜ್ಞಾನಿ ದಿವಾಕರ ವೈ ಯವರು ತೆಂಗು ಕೃಷಿಕರಿಗೆ ಉಪಯುಕ್ತ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಸಂಸ್ಥೆಯ ಸುಳ್ಯ ಘಟಕ ಅಧ್ಯಕ್ಷ ಗಿರಿಧರ ಸ್ಕಂದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಿಗೆ ಶೇರು ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾವ್ಯ ಕೆ ರವರು ಪ್ರಾರ್ಥಿಸಿದರು.ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ಸ್ವಾಗತಿಸಿದರು. ಸಂಸ್ಥೆಯ ಸಿ.ಇ.ಒ ಚೇತನ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಸುಳ್ಯ ಶಾಖೆಯ ಮೇಲ್ವಿಚಾರಕಿ ಅಪರ್ಣ ವಂದಿಸಿದರು. ನವ್ಯ ಅಮೈ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ಕೃಷಿಕ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.