ಪಂಚಾಯತ್ ಸದಸ್ಯರ ಮನವಿಗೆ ಸ್ಪಂದಿಸಿ ಕೂಡಲೇ ದುರಸ್ತಿ ಪಡಿಸಿ ಪ್ರಸಂಸೆಗೆ ಪಾತ್ರರಾದ ಮೆಸ್ಕಾಂ ಇಲಾಖೆ
ಜುಲೈ 26ರಂದು ಕೆರೆಮೂಲೆ ವಾರ್ಡಿನ ಜಂಕ್ಷನ್ ಬಳಿ ಬಾರಿ ಗಾಳಿ ಮಳೆಗೆ ಬೃಹತ್ ಮರವೊಂದು ವಿದ್ಯುತ್ ಕಂಬಗಳ ಮೇಲೆ ಮುರಿದು ಬಿದ್ದು ಒಂದು ಟ್ರಾನ್ಸ್ಫರ್ ಕಂಬ ಸೇರಿದಂತೆ ಎರಡು ವಿದ್ಯುತ್ ಕಂಬಗಳು ಸಂಪೂರ್ಣವಾಗಿ ನೆಲಕ್ಕುರುಗಳಿದ್ದವು.
ಈ ಘಟನೆಯಿಂದ ಸ್ಥಳೀಯ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ವಿಷಯ ತಿಳಿದ ಸ್ಥಳೀಯ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಕೂಡಲೆ ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ವೀಕ್ಷಣೆ ನಡೆಸಿ ಮೆಸ್ಕಾಂ ಇಲಾಖೆಯವರಿಗೆ ಮಾಹಿತಿಯನ್ನು ತಿಳಿಸಿದ್ದರು.
ನಗರ ಪಂಚಾಯತ್ ಸದಸ್ಯರ ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ ಕೂಡಲೆ ಸ್ಪಂದಿಸಿ ಕಾರ್ಯಪ್ರವೃತ್ತರಾಗಿ ಕಂಬಗಳನ್ನು ದುರಸ್ತಿ ಪಡಿಸಿಕೊಡುವ ಮೂಲಕ ಸ್ಥಳೀಯ ಜನರ ಮತ್ತು ವಾರ್ಡ್ ಸದಸ್ಯರ ಪ್ರಶಂಸೆಗೆ ಕಾರಣರಾಗಿದ್ದಾರೆ.