ಪಂಜ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

0

🔻 ನಿವೃತ್ತ ಯೋಧ ವಸಂತ ಕುಮಾರ್ ಕಲ್ಕರವರಿಗೆ ಗೌರವಾರ್ಪಣೆ

ರ್ಕಾರ್ಗಿಲ್ ವಿಜಯ ದಿವಸ ಆಚರಣೆಯ ಅಂಗವಾಗಿ ಪಂಜ ಲಯನ್ಸ್ ಕ್ಲಬ್ ವತಿಯಿಂದ ಜು. 26 ರಂದು ನಿವೃತ್ತ ಯೋಧ ವಸಂತ ಕುಮಾರ್ ಕಲ್ಕ
ರವರನ್ನು ಗೌರವಿಸಲಾಯಿತು.


ಗೌರವ ಸ್ವೀಕರಿಸಿದ ವಸಂತ ರವರು ಕಾರ್ಗಿಲ್ ವಿಜಯ ದಿವಸ್ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಧಕ್ಷ ದಿಲೀಪ್ ಬಾಬ್ಲುಬೆಟ್ಟು ರವರು ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಪ್ಪ ಗೌಡ ಚಿದ್ಗಲ್ಲು ರವರು ಯೋಧ ವಸಂತ ರವರನ್ನು ಸನ್ಮಾನಿಸಿದರು.ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ವಂದಿಸಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಕೋಶಾಧಿಕಾರಿ ಆನಂದ ಗೌಡ, ಪ್ರಥಮ ಉಪಾಧ್ಯಕ್ಷ ಶಶಿಧರ ಪಳಂಗಾಯ, ಅನುರಾಜ ಕಕ್ಯಾನ, ಕೇಶವ ಗೌಡ ಕುದ್ವ, ಹಾಗೂ ನಿವೃತ್ತ ಯೋಧ ವಸಂತ ರವರ ತಂದೆ ಹರಿಯಪ್ಪ ಗೌಡ ಮತ್ತು ಮನೆಯವರು ಉಪಸ್ಥಿತರಿದ್ದರು.