ಸುಳ್ಯ ನಗರ ವ್ಯಾಪ್ತಿಗಳ ರಸ್ತೆ ಅಭಿವೃದ್ಧಿಗೆ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸರ್ವೆ ಕಾರ್ಯ

0

ಸುಳ್ಯ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ವಾರ್ಡ್ ಗಳ ಒಳರಸ್ತೆಗಳ ವಿಸ್ತೀರ್ಣ 9 ಅಡಿಗಳಷ್ಟು ಇರಬೇಕಾಗಿದೆ ಎಂದು ನಗರ ಅಭಿವೃದ್ಧಿ ನಿಗಮದಿಂದ ನಿಯಮ ರೂಪಿಸಿದ್ದು ಇದಕ್ಕೆ ಪೂರಕವಾಗಿ ಸುಳ್ಯ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಪೂರ್ವ ಯೋಜಿತವಾಗಿ ಸರ್ವೆ ಕಾರ್ಯವನ್ನು ನಡೆಸಿದರು.

ಸುಳ್ಯ ನಗರದ 6 ಮತ್ತು 7ನೇ ವಾರ್ಡ್ ನ ರಸ್ತೆಗಳ ಸರ್ವೆ ಕಾರ್ಯವನ್ನು ನಡೆಸಿ ಮಾಹಿತಿ ಸಂಗ್ರಹಿಸಿದ ಇಂಜಿನಿಯರ್ಸ್ ತಂಡ ನಿಯಮದಲ್ಲಿ ಬರುವಂತೆ 9 ಅಡಿಗಳ ವಿಸ್ತೀರ್ಣವಿರುವ ರಸ್ತೆಗಳು,ಅದಕ್ಕಿಂತ ಕಡಿಮೆ ವಿಸ್ತೀರ್ಣ ಇರುವ ರಸ್ತೆಗಳು, ರಸ್ತೆಗಳ ಬದಿಗಳಲ್ಲಿ ಬರುವ ಚರಂಡಿಗಳ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿಕೊಂಡು ದಾಖಲಿಸಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಇಂಜಿನಿಯರ್ ಅಸೋಸಿಯೇಷನ್ ಮುಖ್ಯಸ್ಥ ಎಂ ಎಸ್ ಪ್ರಸಾದ್ ‘ಸುಳ್ಯ ನಗರ ಪಂಚಾಯತ್ ಕಾರ್ಯಾಲಯಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಮ್ಮ ಸಂಘದ ವತಿಯಿಂದ ಈ ಸಹಕಾರವನ್ನು ಮಾಡುತ್ತಿದ್ದು ಇಂದಿನಿಂದ ಸರ್ವೆ ಕಾರ್ಯವನ್ನು ಆರಂಭಿಸಿದ್ದೇವೆ.


ರಸ್ತೆಗಳ ವಿಸ್ತೀರ್ಣ ಮತ್ತು ರಸ್ತೆ ಬದಿಗಳಲ್ಲಿ ಬೇಕಾಗಿರುವ ಚರಂಡಿ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿಯ ಸರ್ವೆಗಳನ್ನು ನಡೆಸಿ ಅದನ್ನು ದಾಖಲಿಸಿ ಪಂಚಾಯತ್ ನವರಿಗೆ ನೀಡಲಿದ್ದೇವೆ ಎಂದು ಹೇಳಿದರು.ನಗರದ ಅಭಿವೃದ್ಧಿ ಅವಶ್ಯಕವಾಗಿದ್ದು ನಮ್ಮ ಅಸೋಸಿಯೇಷನ್ ಎಲ್ಲಾ ಸದಸ್ಯರು ಈ ಕೆಲಸಕ್ಕೆ ಕೈಜೋಡಿಸಿ ನಮ್ಮಿಂದ ಆಗುವ ಸಹಕಾರವನ್ನು ಮಾಡುತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ನಿರ್ದೇಶಕರುಗಳಾದ ಗಿರೀಶ್, ವಿಜಯಕುಮಾರ್,ಶ್ಯಾಮ್ ಪ್ರಸಾದ್, ನವನೀತ್,ಗುರುರಾಜ್,ಹಾಗೂ ನಗರ ಪಂಚಾಯತಿ ಸದಸ್ಯರುಗಳಾದ ಕಿಶೋರಿ ಶೇಟ್, ಶಿಲ್ಪಾಸುದೇವ್,ಡೇವಿಡ್ ಧೀರಕ್ರಾಸ್ತಾ,ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಸಿಬ್ಬಂದಿ ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.