ಸುಳ್ಯ ಶಾಸ್ರ್ತಿ ವೃತ್ತದ ಬಳಿ ಕಾಡು ಪೊದೆಗಳಿಂದ ಆವೃತ್ತಗೊಂಡ ಫುಟ್ ಪಾತ್

0

ಸುಳ್ಯ ನಗರದ ಶಾಸ್ತ್ರಿ ವೃತ್ತದ ಬಳಿ ಕಾಡು ಬಳ್ಳಿಗಳು, ಪೊದೆಗಳು ಬೆಳೆದು ಈ ಭಾಗದ ಫುಟ್ ಪಾತ್ ಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಇದೇ ರೀತಿ ಮುಂದುವರಿದಲ್ಲಿ ಕಾಡು ಬಳ್ಳಿಗಳು ರಸ್ತೆಗೆ ಬಂದು ದ್ವಿಚಕ್ರ ವಾಹನ ಸವಾರರಿಗೆ, ಪಾದ ಚಾರಿಗಳಿಗೆ ಸಮಸ್ಯೆ ಉಂಟುಮಾಡುವ ಲಕ್ಷಣಗಳು ಕಂಡುಬರುತ್ತಿದೆ.
ಅಲ್ಲದೆ ಈ ರಸ್ತೆಯನ್ನು ನೂರಾರು ವಿದ್ಯಾರ್ಥಿಗಳು ಸಾರ್ವಜನಿಕರು ನಡೆದಾಡಲು ಬಳಸುತ್ತಿದ್ದು ಇಲ್ಲಿ ತುಂಬಿರುವ ಕಾಡಿನಲ್ಲಿ ವಿಷಕಾರಿ ಆವು ಜಂತುಗಳು ಕೂಡಿರುವ ಸಾಧ್ಯತೆಗಳು ಇದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.