ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ “ಡ್ರಗ್ ಫ್ರೀ ದಕ್ಷಿಣ ಕನ್ನಡ” ಅರಿವು ಮತ್ತು ಜಾಗೃತಿ ಕಾರ್ಯಕ್ರಮ

0


ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಮಾದಕ ವಸ್ತು ವಿರೋಧಿ ಘಟಕ ಮತ್ತು ಅಭಕಾರಿ ಉಪ ಅಧೀಕ್ಷಕರ ಕಛೇರಿ, ಪುತ್ತೂರು ಜಂಟಿಯಾಗಿ ಕಾಲೇಜಿನ ಆಡಿಟೋರಿಯಂನಲ್ಲಿ ಜು. ೨೭ ರಂದು “ಡ್ರಗ್ ಫ್ರೀ ದಕ್ಷಿಣ ಕನ್ನಡ” ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಅಶೋಕ್ ಪೂಜಾರಿ, ಡಿ.ವೈ.ಎಸ್.ಪಿ., ಅಭಕಾರಿ ಉಪ ಅಧೀಕ್ಷಕರ ಕಛೇರಿ, ಪುತ್ತೂರು ಆಗಮಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾದಕ ವಸ್ತುಗಳ ಛಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯು ಮಾರಕ ರೋಗಗಳಿಗೆ ತುತ್ತಾಗುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಗಳತ್ತ ದಾಸರಾಗದೆ ಉತ್ತಮ ಸಮಾಜ ರೂಪಿಸಲು ಹಾಗೂ ಸದೃಡ ದೇಶ ಕಟ್ಟಲು ಕೈಜೋಡಿಸಿ ಎಂದು ಕರೆ ನೀಡುವುದರೊಂದಿಗೆ ಮಾದಕ ವ್ಯಸನದಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.


ಕಾಲೇಜಿನ ಸಿ.ಇ.ಒ. ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಹಾಗೂ ಕಾಲೇಜಿನ ಎನ್.ಎಸ್.ಎಸ್. ಘಟಕಾಧಿಕಾರಿಗಳಾದ ಡಾ. ಪ್ರಜ್ಞ ಎಂ.ಆರ್. ಮತ್ತು ಪ್ರೊ. ಸತ್ಯಜಿತ್ ಎಂ. ಮತ್ತು ಪ್ರೊ. ಪ್ರಶಾಂತ್ ಕಕ್ಕಾಜೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞ ಎಂ.ಆರ್. ಮತ್ತು ಪ್ರೊ. ಲೋಕೇಶ್ ಪಿ.ಸಿ ಕಾರ್ಯಕ್ರಮವನ್ನು ಸಂಯೋಜಿಸಿದರು.