ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ಆಟಿಡೊಂಜಿ ದಿನ, ಚೆನ್ನೆಮಣೆ, ಕಲ್ಲಾಟದ, ಔತಣದ ಸಂಭ್ರಮ

0

ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಸವಣೂರು ಕೆ. ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮ ಜು. 29ರಂದು ಬೆಳಿಗ್ಗೆಯಿಂದ ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಯ ಆಟ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕನ್ನಡ ಪ್ರಾಧ್ಯಾಪಕರಾದ, ಅಂಕಣಕಾರ ನರೇಂದ್ರ ರೈ ದೇರ್ಲ ವಿಶೇಷವಾಗಿ ತುಳುವೆರೆ ಆಟಿ ಎಂಬ ಲೇಖನವನ್ನು ಹೊಂದಿದ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಕತ್ವದ ಪೂವರಿ ಪತ್ರಕೆಯ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹವು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ ಮತ್ತು ನಮ್ಮ ಟಿವಿ ಚಾನೆಲ್ ಏ್ಯಂಕರ್ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಕು. ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.


ಮಧ್ಯಾಹ್ನ 49 ವಿಧದ ಆಟಿಯ ವಿಶೇಷ ಖಾದ್ಯಗಳನ್ನೊಳಗೊಂಡಿರುವ ಭೋಜನ ನಡೆಯಿತು. ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಶಾಂತ್ ಮಹಲ್ ನ ವ್ಯವಸ್ಥಾಪಕರಾದ ಮಧುಸೂದನ್, ಹರೀಶ್, ಮತ್ತು ತಂಡದವರು ಸಂಘಟಿಸಿದರು.