ಮರ ಬಿದ್ದು ಬಂದ್ ಆಗಿದ್ದ ಜಾಲ್ಸೂರು ಕಾಸರಗೋಡು ರಸ್ತೆ ವಾಹನ ಸಂಚಾರಕ್ಕೆ ಮುಕ್ತ

0

ವಿದ್ಯುತ್ ಕಂಬಗಳಿಗೂ ಹಾನಿ – ಅಪಾಯಕಾರಿ ಮರಗಳ ತೆರವು ಕಾರ್ಯ

ಬೃಹದಾಕಾರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಸತತ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಬಂದ್ ಆಗಿದ್ದ ಜಾಲ್ಸೂರು – ಕಾಸರಗೋಡು ರಸ್ತೆಯು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಈ ಭಾಗದಲ್ಲಿದ್ದ ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಬೆಳಿಗ್ಗೆ 11.30ಕ್ಕೆಬೃಹದಾಕಾರದ ಮರ ರಸ್ತೆಗೆ ಬಿದ್ದ ಕಾರಣದಿಂದಾಗಿ ಜಾಲ್ಸೂರು – ಕಾಸರಗೋಡು ರಸ್ತೆ ಬಂದ್ ಆಗಿತ್ತು. ಬಳಿಕ ಸ್ಥಳೀಯರು ಸೇರಿ ಸುಳ್ಯ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿ, ಅವರು ಹಾಗೂ ಸ್ಥಳೀಯರ ನೆರವಿನಿಂದ ಮರವನ್ನು ಸುಮಾರು ಒಂದೂವರೆ ಗಂಟೆಗಳ ಬಳಿಕ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು. ಕೆಲವೊಂದು ವಾಹನಗಳು ಮುರೂರಿನಿಂದ ಮಂಡೆಕೂಲು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಿದ್ದು , ಕೇರಳ ರಸ್ತೆ ಸಾರಿಗೆ ಬಸ್ ಸೇರಿದಂತೆ ಘನ ವಾಹನಗಳು ಮರ ತೆರವುಗೊಂಡ ಬಳಿಕ ಸ್ಥಳದಿಂದ ತೆರಳಿತೆಂದು ತಿಳಿದುಬಂದಿದೆ.
ಬಿದ್ದ ಮರದ ತೆರವು ಕಾರ್ಯ ನಡೆದ ಬಳಿಕ ಆ ಪರಿಸರದಲ್ಲಿ ಇದ್ದ ಅನೇಕ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಬೃಹದಾಕಾರದ ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮವಾಗಿ ನಾಲ್ಕು ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ‌.ಎಂ. ಬಾಬು ಅವರು ಸ್ಥಳದಲ್ಲೇ ಇದ್ದು, ಮರ ತೆರವು ಕಾರ್ಯ ಮಾಡಿಸುತ್ತಿರುವುದಾಗಿ ತಿಳಿದುಬಂದಿದೆ.