ಸೊಳ್ಳೆ ಕಾಟ ನಿಯಂತ್ರಿಸುವಂತೆ ಕೋರಿ ಸುಳ್ಯ ನಗರ ಪಂಚಾಯತ್ ಗೆ ಹೀಗೊಂದು ಪತ್ರ
ನಗರ ಪಂಚಾಯತ್ ನವರು ಕಸದ ರಾಶಿಯಿಂದ ಮುಕ್ತಿಯಾಗಿ ಬದುಕಲು ಕಲಿತ್ರು.. ಆದ್ರೆ ಕಲ್ಚರ್ಪೆಯ ನಿವಾಸಿಗಳನ್ನು ಬದುಕಲು ಬಿಡುತ್ತಿಲ್ಲ…. ದಿನವಿಡೀ ಮನೆ ಬಾಗಿಲು ಹಾಕಿಕೊಂಡು ಬದುಕುವ ಪರಿಸ್ಥಿತಿ ಆದ್ರೂ, ಮನೆಯ ಒಳಗಡೆ ನುಸಿ ಕಾಟ ಮಾತ್ರ ತಡೆಯೋಕೆ ಆಗ್ತಿಲ್ಲ. ಜೊತೆಗೆ ಸಣ್ಣ ಪುಟ್ಟ ಮಕ್ಕಳು ಅವರ ಪರಿಸ್ಥಿತಿ ಮನೆಯವರಿಗೆ ಮಾತ್ರ ಗೊತ್ತಾಗಬೇಕೇ ಹೊರತು ಯಾವ ಅಧಿಕಾರಿಗಳಿಗೂ ಗೊತ್ತಾಗೊದಿಲ್ಲ… ಇದು ಸುಳ್ಳು ಹೇಳೋದು ಅಂತ ಅಂದ್ರೆ ಸಾಯಂಕಾಲ 10 ನಿಮಿಷ ಕಲ್ಚರ್ಪೆಯ ಮನೆಗಳಲ್ಲಿ ಬಂದು ನಿಂತು ನೋಡಲಿ. ನಮ್ಮ ಕಷ್ಟ ಅವರು ಅನುಭವಿಸಲಿ… ನಗರ ಪಂಚಾಯತ್ ನವರಿಗೆ ಸೊಳ್ಳೆ ಕಾಟ ತಡೆಯೋಕೆ ಆಗದೆ ಅಲ್ಲಿ ಹಾಕುತ್ತಿದ್ದ ಕಸವನ್ನು ಅಲ್ಲಿಂದ ವಾಪಸ್ ಕಲ್ಚರ್ಪೆಗೆ ತರುವ ವ್ಯವಸ್ಥೆ ಮಾಡಿದ್ರು. ನಾವು ಅವರ ಹಾಗೆ ಮನುಷ್ಯರಲ್ಲವೆ… ನೀವು ಬದುಕಿ ನಮ್ಮನ್ನು ಬದುಕಲು ಬಿಡಿ…
ಹೀಗೆಂದು, ಸೊಳ್ಳೆಗಳ ಕಾಟ ಸಹಿಸಲಾಗದೇ ಕಲ್ಚರ್ಪೆಯ ನಿವಾಸಿಗಳು ನಗರ ಪಂಚಾಯತ್ ಗೆ ಸೊಳ್ಳೆಗಳನ್ನು ನಿಯಂತ್ರಿಸುವಂತೆ ಕೋರಿ ಈ ಮೂಲಕ ಮನವಿ ಮಾಡಿದ್ದಾರೆ. ಇನ್ನಾದರೂ ನಗರ ಪಂಚಾಯತ್ ನವರು ಹಾಗೂ ಆರೋಗ್ಯ ಇಲಾಖೆ ಇತ್ತ ಗಮನಹರಿಸಬೇಕಾಗಿದೆ.