ಕಾರಿಗೆ ಸ್ಕೂಟರ್ ತಾಗಿದ ವಿಷಯಕ್ಕೆ ಸಂಬಂಧಿಸಿ ರಸ್ತೆಯಲ್ಲಿ ಗಲಾಟೆ

0

ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಉಂಟುಮಾಡಿದ ಆರೋಪದಡಿ ಇಬ್ಬರ ಮೇಲು ಪ್ರಕರಣ ದಾಖಲು

ಸುಳ್ಯ ಗಾಂಧಿನಗರ ಆಲೆಟ್ಟಿ ಕ್ರಾಸ್ ರಸ್ತೆಯಲ್ಲಿ ಆಲ್ಟೊ ಕಾರು ಚಾಲಕ ಮತ್ತು ಸ್ಕೂಟರ್ ಸವಾರರ ನಡುವೆ ಗಲಾಟೆ ಉಂಟಾಗಿ, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಸುಳ್ಯ ಠಾಣೆಗೆ ಕರೆದೊಯ್ಯಿದು ಕಲಂ 160 ಐ ಪಿ ಸಿ ಪ್ರಕಾರ ಸಾರ್ವಜನಿಕ ಅಶಾಂತಿ ಉಂಟು ಮಾಡಿರುವ ಪ್ರಕರಣವನ್ನು ದಾಖಲಿಸಿರುವ ಘಟನೆ ಜುಲೈ 30ರಂದು ವರದಿಯಾಗಿದೆ.

ಘಟನೆಯ ವಿವರ,ಚೆಂಬು ಗ್ರಾಮದ ಲೋಕೇಶ್ ಪಿ ಟಿ ಎಂಬುವರು ತಮ್ಮ ಆಲ್ಟೋ ಕಾರಿನಲ್ಲಿ ಅರಂತೋಡು ಭಾಗದಿಂದ ಸುಳ್ಳಕ್ಕೆ ಬರುತ್ತಿದ್ದ ಸಂದರ್ಭ ಅದೇ ರಸ್ತೆಯಲ್ಲಿ ಕಾಸರಗೋಡು ಮೂಲದ ಪ್ರದೀಪ್ ಎಂಬುವವರು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಚಲಾಯಿಸಿ ಕೊಂಡು ಬರುತ್ತಿದ್ದ ಸ್ಕೂಟರ್ ಪೆರಾಜೆ ಸಮೀಪ ಲೋಕೇಶ್ ರವರ ಕಾರಿಗೆ ಅಲ್ಪ ಮಟ್ಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ವೇಳೆ ಸ್ಕೂಟರ್ ಸವಾರ ತಮ್ಮ ವಾಹನವನ್ನು ನಿಲ್ಲಿಸದೆ ಸುಳ್ಯದತ್ತ ಬಂದಿದ್ದಾರೆ ಎನ್ನಲಾಗಿದ್ದು ಇವರನ್ನು ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿ ಸ್ಕೂಟರ್ ಚಾಲಕರನ್ನು ತಡೆದು ವಿಚಾರಿಸಿ ಸ್ಕೂಟರ್ ಸವಾರರಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರು ಬಂದು ಜಗಳ ಬಿಡಿಸಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗದೆ ಇದ್ದಾಗ ವಿಷಯ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಸುಳ್ಯ ಠಾಣೆಗೆ ಕರೆದೋಯ್ಯಿದು ವಿಚಾರಣೆ ನಡೆಸಿ ಇಬ್ಬರ ಮೇಲು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.