ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಇಲ್ಲಿಯ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಆ.1 ರಂದು ಸುಳ್ಯದ ಅಮೃತ ಭವನದಲ್ಲಿ ನಡೆಯಿತು.
ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು. ಬಳಿಕ ಮಾತನಾಡಿದ ಅವರು “ವಿದ್ಯಾಭ್ಯಾಸದ ಈ ಸಮಯ ಜೀವನದ ಬಹು ಮುಖ್ಯ ಘಟ್ಟ. ತಾವು ತಮ್ಮ ಗುರಿಯತ್ತ ಸಾಗಲು ಶ್ರಮಪಡಬೇಕು. ಓದಿನೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಸಾಧನೆ ಮಾಡಿ ಎಂದು ಅವರು ಹೇಳಿದರು.
ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಗೌಡ ವಿದ್ಯಾಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿತಂಗಮ್ಮ, ಪ್ರೌಢಶಾಲಾ ವಿಭಾಗ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ, ಕಾಲೇಜು ಸಂಘದ ಪದಾಧಿಕಾರಿಗಳಾದ ಪರಿಷ್ಮಾ, ಸಹಲಾ, ಪ್ರಜ್ಞಾ ಕೆ, ಸೋನಾ, ಕೃತಿ, ಕೃತಿಕಾ, ಸಪ್ನ, ಯಶಸ್ವಿ, ಭಾಗ್ಯಶ್ರೀ, ಸುಷ್ಮಾ, ಆಯಿಷತ್ ಶಿಫಾನ ವೇದಿಕೆಯಲ್ಲಿ ಇದ್ದರು.
ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಬಳಿಕ ಸಂಘದ ಪದಾಧಿಕಾರಿಗಳು, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್, ಇಕೋಕ್ಲಬ್,ರೆಡ್ ಕ್ರಾಸ್ ಪದಾಧಿಕಾರಿಗಳ ಪ್ರತಿಜ್ಞಾವಿಧಿ ನಡೆಯಿತು. ಕಾಲೇಜಿನ ಉಪನ್ಯಾಸಕ ದಾಮೋದರ್ ಪ್ರತಿಜ್ಞೆ ಬೋಧಿಸಿದರು. ಉಪನ್ಯಾಸಕ ಪ್ರಸನ್ನ ಎನ್.ಎಚ್.ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು.
ಫಾತಿಮತ್ ಶಿಫಾನ , ಚಿನ್ಮಯಿ ಹಾಗೂ ರೆತಿಕಾ ಕಾರ್ಯಕ್ರಮ ನಿರ್ವಹಿಸಿದರು.