ಶ್ರೀ ದುರ್ಗಾ ಮಹಿಳಾ ಮಂಡಲ ಕೇನ್ಯ ಇದರ ವತಿಯಿಂದ 2ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಜು. 29 ರಂದು ಕೇನ್ಯ ಅಂಗನವಾಡಿ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರು ಆಟಿ ತಿಂಗಳಿನಲ್ಲಿ ಉಪಯೋಗಿಸುವ ವಿವಿಧ ಬಗೆಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ತಂದು ಅದರ ಪರಿಚಯ ಮತ್ತು ಪ್ರಯೋಜನದ ಬಗ್ಗೆ ವಿವರಿಸಿದರು. ಆಟಿ ತಿಂಗಳಿನ ವಿಶೇಷತೆ, ಆರೋಗ್ಯಕ್ಕೆ ಈ ಆಹಾರದಿಂದಾಗುವ ಪ್ರಯೋಜನ,ಹಿಂದಿನ ಕಾಲಕ್ಕೂ ಇಂದಿಗೂ ಆಗಿರುವ ಬದಲಾವಣೆ ಬಗ್ಗೆ ಚರ್ಚಿಸಿದರು. ನಂತರ ಎಲ್ಲರೂ ಒಟ್ಟಾಗಿ ಬಂದಂತಹ ಅತಿಥಿಗಳ ಜೊತೆ ಸಹ ಭೋಜನ ನಡೆಯಿತು.