ಕಲ್ಲುಗುಂಡಿ ಪೇಟೆಯ ಕೂಲಿಶೆಡ್ದ್ ಮಾಣಿ ಮೈಸೂರು ಹೆದ್ದಾರಿಯಲ್ಲಿ ರಸ್ತೆಯ ನಡು ಭಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಕೆಲವು ದ್ವಿಚಕ್ರ ವಾಹನ ಸವಾರರು ವೇಗದಿಂದ ಬರುವಾಗ ಈ ಗುಂಡಿಯನ್ನು ಕಾಣದೆ ವಾಹನದ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ನಿರ್ಮಾಣವಾಗಿತ್ತು.
ಇದನ್ನೆಲ್ಲಾ ಕಂಡ ಸ್ಥಳೀಯ ವ್ಯಾಪಾರಿ ಭಾರತ್ ಪೈಂಟ್ ಅಂಗಡಿ ಮಾಲಕ ಕಿಫಾಯತುಲ್ಲಾ ಎಂಬುವವರು ಸ್ಪಂದಿಸಿ ಹೊಂಡ ನಿರ್ಮಾಣವಾದ ಜಾಗಕ್ಕೆ ಜಲ್ಲಿ ಸಿಮೆಂಟ್ ಹಾಕಿ ದುರಸ್ತಿಪಡಿಸಿ ಸಹಕರಿಸಿದರು.