Home ಪ್ರಚಲಿತ ಸುದ್ದಿ ಗುತ್ತಿಗಾರು : ಅನಿಕೇತನ ವಿಶೇಷ ಚೇತನರ ಆರೈಕೆದಾರರ ಸಂಜೀವಿನಿ ಸ್ವಸಹಾಯ ಸಂಘ ರಚನೆ

ಗುತ್ತಿಗಾರು : ಅನಿಕೇತನ ವಿಶೇಷ ಚೇತನರ ಆರೈಕೆದಾರರ ಸಂಜೀವಿನಿ ಸ್ವಸಹಾಯ ಸಂಘ ರಚನೆ

0

ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.04 ರಂದು ವಿಶೇಷ ಚೇತನರ ಸಭೆ ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ಅನಿಕೇತನ ಎಂಬ ಹೆಸರಿನ ವಿಶೇಷಚೇತನರ ಆರೈಕೆದಾರರ ಸಂಜೀವಿನಿ ಸ್ವಸಹಾಯ ಸಂಘ ರಚನೆಗೊಂಡಿತು.


ಈ ಸಂದರ್ಭದಲ್ಲಿ ತಾಲೂಕಿನ ಎಂ.ಆರ್.ಡಬ್ಲ್ಯೂ ಚಂದ್ರಶೇಖರ, ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕ ಅವಿನಾಶ್, ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕಾವೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಶೇಷ ಚೇತನರ ಬಗ್ಗೆ ಮಾಹಿತಿ ನೀಡಲಾಯಿತು. ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕರು ಹಾಗೂ ಒಕ್ಕೂಟದ ಅಧ್ಯಕ್ಷೆ ಸಂಜೀವಿನಿ ಸ್ವಸಹಾಯ ಸಂಘದ ಉದ್ದೇಶವನ್ನು ಸದಸ್ಯರಿಗೆ ತಿಳಿಸಿದರು. ಗ್ರಂಥಪಾಲಕಿ ಅಭಿಲಾಷಾ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ.ಕೆ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕಾವೇರಿ ಧನ್ಯವಾದ ಸಮರ್ಪಿಸಿದರು.


ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್.ಸಿ.ಆರ್.ಪಿ ದಿವ್ಯ ಚತ್ರಪ್ಪಾಡಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಗುತ್ತಿಗಾರು ಹಾಗೂ ನಾಲ್ಕೂರಿನ ವಿಶೇಷಚೇತನರು ಪೋಷಕರೊಂದಿಗೆ ಭಾಗವಹಿಸಿದ್ದರು.
ವಿಶೇಷಚೇತನರು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಭೇಟಿ ನೀಡಿದರು. ಗ್ರಂಥಪಾಲಕಿ ಅಭಿಲಾಷಾ ಸಹಕರಿಸಿದರು.

NO COMMENTS

error: Content is protected !!
Breaking