ಮುರುಳ್ಯ ಶಾಲೆಯಲ್ಲಿ ಪೋಷಕರ ಸಭೆ

0

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ, ಸದಸ್ಯರ ಮರುನೇಮಕ

ಮುರುಳ್ಯ ಅಲೆಕ್ಕಾಡಿ ಸ. ಉ.ಹಿ.ಪ್ರಾ. ಶಾಲೆಯಲ್ಲಿ ಜುಲೈ 31 ರಂದು ಪೋಷಕರ ಸಭೆ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಶ್ರೀಮತಿ ಮಧು ಪಿ. ಆರ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಅವಿನಾಶ್ ದೇವರಮಜಲು, ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಬಿ. ಪೂಜಾರಿ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಅವಿನಾಶ್ ದೇವರ ಮಜಲು, ಉಪಾಧ್ಯಕ್ಷರಾಗಿ ಶ್ರೀಮತಿ ಹರ್ಷಿತ ಕೆ.ಎಸ್., ಸದಸ್ಯರಾಗಿ ವಾರಿಜಾಕ್ಷಿ ಕೆ.ವಿ. ಶ್ರೀಮತಿ ವಿದ್ಯಾ, ಶ್ರೀಮತಿ ಲತಾ, ಶೇಖರ ಪೂಂಜಕಟ್ಟೆ, ಶ್ರೀಮತಿ ಲೋಲಾಕ್ಷಿ, ಶ್ರೀಮತಿ ವೀಣಾ, ಸಂತೋಷ್ ಆಯ್ಕೆಯಾದರು. ಶ್ರೀಮತಿ ನಳಿನಾಕ್ಷಿ ರೈ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಮಮತ ವಂದಿಸಿದರು. ಶಿಕ್ಷಕಿ ಭವಾನಿ ಕಾರ್ಯಕ್ರಮ ನಿರೂಪಿಸಿದರು.