ಸುಳ್ಯ ಎನ್ನೆoಪಿಯುಸಿಯಲ್ಲಿ ಮಾಹಿತಿ ಕಾರ್ಯಕ್ರಮ

0


ವ್ಯಕ್ತಿ ಹುಟ್ಟಿನಿಂದ ಸಾಯುವ ತನಕ ಫೋಸ್ಕೋ ಕಾಯಿದೆ ನೆರವಿಗೆ ಬರುತ್ತದೆ. ನಮ್ಮ ಭವಿಷ್ಯ ರೂಪಿಸುವಲ್ಲಿ ನಾವು ಅತ್ಯoತ ಜಾಗರೂಕರಾಗಬೇಕು.ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು 18ವರ್ಷದೊಳಗಿನ ಮಕ್ಕಳು ವೈಯಕ್ತಿಕ ಜಾಗ್ರತೆ ವಹಿಸಿಕೊಳ್ಳಬೇಕು.ಮಾದಕ ವ್ಯಸನ ಉಂಟು ಮಾಡುವ ದುಷ್ಪರಿಣಾಮಗಳ ಬಗ್ಗೆ ನಮ್ಮಲ್ಲಿ ಅರಿವು ಇರಬೇಕು ಅಲ್ಲದೇ ಮೊಬೈಲ್ ಬಳಕೆಯನ್ನು ಎಚ್ಚರದಿಂದ ಉಪಯೋಗಿಸಬೇಕು.ಪರವಾನಿಗೆ,ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಬಾರದು.ಜನರಿಗೆ ವೈಯಕ್ತಿಕ ಸುರಕ್ಷತೆ ಬಹಳ ಮುಖ್ಯ. ಅಸಹಾಯಕರಿಗೆ, ದುರ್ಬಲರಿಗೆ ಸಹಾಯ ಮಾಡುತ್ತ ಮನುಷ್ಯತ್ವ ದಿಂದ ನಾವು ಬಾಳಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸುಳ್ಯದ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಈರಯ್ಯ ದುಂತೂರ್ ಅವರು ಹೇಳಿದರು.

ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ Anti drug cell ಇದರ ವತಿಯಿಂದ ಆಯೋಜಿಸಿದ ಫೋಸ್ಕೋ ಕಾಯಿದೆ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ದೈನಂದಿನ ಜೀವನದಲ್ಲಿ ವಿದ್ಯಾರ್ಥಿಗಳು ಸಭ್ಯ ವ್ಯಕ್ತಿತ್ವ ಹೊಂದಿ ಸಮಾಜದ ನೀತಿ -ನಿಯಮ,ಕಾನೂನು ಪಾಲನೆ ಮಾಡುತ್ತಾ ಬದುಕಿಗೆ ಪೂರಕವಾಗಿ ಸಹಬಾಳ್ವೆ ಯಿಂದ ಬದುಕಬೇಕು,ಪರಿಪೂರ್ಣತೆಯ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಭಿಜ್ಞಾ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ ಸ್ವಾಗತಿಸಿ, ಹರೀಶ ಸಿ ವಂದಿಸಿದರು. ಉಪನ್ಯಾಸಕಿ ಸಾವಿತ್ರಿ ಕೆ ಕಾರ್ಯಕ್ರಮ ನಿರೂಪಿಸಿದರು.