ಸುಳ್ಯದ ಮ್ಯಾಟ್ರಿಕ್ಸ್ ಶಿಕ್ಷಣ ಸಂಸ್ಥೆಯಲ್ಲಿ ಆಟಿ ಕೂಟ

0

ಸುಳ್ಯದ ಮ್ಯಾಟ್ರಿಕ್ಸ್ ಶಿಕ್ಷಣ ಸಂಸ್ಥೆಯಲ್ಲಿ ಜೇಸಿಐ ಸುಳ್ಯ ಸಿಟಿ ಸಹಯೋಗದೊಂದಿಗೆ ಆಟಿ ಕೂಟ ಆ.೫ರಂದು ನಡೆಯಿತು.
ಸುಳ್ಯದ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ಉದ್ಘಾಟಿಸಿ ಆಟಿಆಚರಣೆಯ ಕುರಿತು ಮಾಹಿತಿನೀಡಿದರು.
ಜೇಸಿಐ ಸುಳ್ಯ ಸಿಟಿ ಅಧ್ಯಕ್ಷ ರಂಜಿತ್ ಪಿ.ಜೆ. ಅಧ್ಯಕ್ಷತೆ ವಹಿಸಿದ್ದರು. ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯರಾಜ್ ಮಡ್ತಿಲ ,ಪ್ರಾಂಶುಪಾಲ ವಿಷ್ಣುಪ್ರಸಾದ್ ನಾರ್ಕೋಡು, ಜೆಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷ ಯು.ಪಿ.ಬಶೀರ್ ಅತಿಥಿಗಳಾಗಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ತರುಣ್‌ಕುಮಾರ್ ಸ್ವಾಗತಿಸಿ, ಆಯಿಷತ್ ಆಶ್ರಿಫಾ ವಂದಿಸಿದರು. ಶ್ರೀ ರಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ಆಟಿಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳು ಮತ್ತು ಆಟಿ ಖಾದ್ಯಗಳ ಭೋಜನ ಆಯೋಜಿಸಲಾಗಿತ್ತು.