ಸೌಜನ್ಯ ಹತ್ಯೆ ಪ್ರಕರಣ – ಆರೋಪಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕವಾಗಿ ನೇಣಿಗೇರಿಸಿ

0

ನ.ಪಂ.ಸದಸ್ಯ ಶರೀಫ್ ಕಂಠಿ‌ ಆಗ್ರಹ

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 11 ವರುಷಗಳ ಹಿಂದೆ ಸೌಜನ್ಯ ಎಂಬ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಮಾಡಿ ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ನ.ಪಂ. ಸದಸ್ಯ ಶರೀಫ್ ಕಂಠಿ‌ ಆಗ್ರಹಿಸಿದ್ದಾರೆ.

ಈ ರೀತಿಯ ಪೈಶಾಚಿಕ ಕೃತ್ಯ ಮುಂದೆಂದೂ ನಡೆಯಬಾರದು. ಅಂದಿನ ಸರಕಾರವು ಸಿಬಿಐ ತನಿಖೆಗೆ ವಹಿಸಿ ಇದೀಗ ನ್ಯಾಯಾಲಯವು ಸಂತೋಷ್ ರಾವ್ ರನ್ನು ನಿರಾಪರಾಧಿ ಎಂದು ಹೇಳಿದೆ. ಹಾಗಿದ್ದರೆ ಈ ಪ್ರಕರಣದ ಆರೋಪಿ ಯಾರೆಂಬುವುದನ್ನು ಸರಕಾರ ಪತ್ತೆಹಚ್ಚಬೇಕು ಹಾಗೆಯೇ ಈ ಪೈಶಾಚಿಕ ಕೃತ್ಯವೆಸಗಿದವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು. ಮಗಳನ್ನು ಕಳೆದುಕೊಂಡ ತಾಯಿಗೆ ಆದ ನೋವು ಇನ್ನುಮುಂದೆ ಯಾವ ತಾಯಿಗು ಬರಬಾರದು ಎಂದು ಹೇಳಿರುವ ಅವರು ಅಗಸ್ಟ್ 8 ರಂದು ನಡೆಯುವ ಸೌಜನ್ಯ ಪರ ಹೋರಾಟದಲ್ಲಿ ಸುಳ್ಯ ನಗರದ ಎಲ್ಲಾ ಸಾರ್ವಜನಿಕರು ಪಕ್ಷ ಜಾತಿ ಮತಭೇದ ಮರೆತು ಭಾಗವಹಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.