ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಆ. ೧೩ರಂದು ಚುನಾವಣೆ ನಡೆಯಲಿದ್ದು, ಆ. ೧ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಆ. ೫ರಂದು ೧೩ ಸ್ಥಾನಗಳಿಗೆ ೧೩ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿರುವುದರಿಂದ ೧೩ ಮಂದಿಯೂ ಅವಿರೋಧವಾಗಿ ಆಯ್ಕೆಯಾಗುವ ಸೂಚನೆ ದೊರಕಿದೆ.
ಒಟ್ಟು ೧೩ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ೭ ಸಮಾನ್ಯ ಸ್ಥಾನಗಳಿಗೆ ಹಾಲಿ ಅಧ್ಯಕ್ಷ ಪಿ.ಎಸ್. ಗಂಗಾಧರ ಪುಚ್ಚಪ್ಪಾಡಿ, ಹಾಲಿ ಉಪಾಧ್ಯಕ್ಷ ನೀಲೇಶ್ವರ ನಾಳ, ಹಾಲಿ ಸದಸ್ಯರಾದ ದಯಾನಂದ ಕೆ. ಕಿನ್ನಿಕುಮ್ರಿ, ಗಣೇಶ್ ಕೆ. ಕಾಜಿಬೆಟ್ಟು, ಜಯರಾಮ ಎ. ಆಲ್ಕಬೆ, ಸುಬ್ರಹ್ಮಣ್ಯ ಕುಳ, ಮತ್ತು ನೂತನವಾಗಿ ಚಿನ್ನಪ್ಪ ಗೌಡ ಉಕ್ಕಿನಮನೆ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹಾಲಿ ಸದಸ್ಯೆ ಮೀನಾಕ್ಷಿ ನೀರಜರಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜಗನ್ನಾಥ ಪಿ. ಪಲ್ಲತ್ತಡ್ಕ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಜಯಂತಿ ಪೊಟ್ಟುಕೆರೆ, ಬಿ ಮೀಸಲು ಕ್ಷೇತ್ರದಿಂದ ಸುರೇಶ್ ಎ. ಆಲ್ಕಬೆ, ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ೨ ಸ್ಥಾನಕ್ಕೆ ಜಯಲಕ್ಷ್ಮಿ ಜೆ ಜತ್ತಿಲ ಮತ್ತು ಹಾಲಿ ಸದಸ್ಯೆ ನಳಿನಿ ಎನ್. ನೀರಜರಿ ನಾಮಪತ್ರ ಸಲ್ಲಿಸಿದ್ದಾರೆ.