ಕೊಲ್ಲಮೊಗ್ರ- ಬೆಂಡೋಡಿ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗಾಗಿ ಮನವಿ ಸಲ್ಲಿಸಲಾಯಿತು.
ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರ ಗ್ರಾಮಗಳ ಗಡಿಭಾಗವಾದ ಬೆಂಡೋಡಿ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇತ್ತೀಚೆಗೆ ಸುರಿದ ಮಳೆಗೆ ಸೇತುವೆ ಸಂಪರ್ಕ ಸೇರಿ ರಸ್ತೆಯೆಲ್ಲ ಸಂಪೂರ್ಣ ಕೆಟ್ಟು ಹೋಗಿದ್ದು, ಜನ ಸಂಚಾರ ವಾಹನ ಸಂಚಾರ ತೀರಾ ದುಸ್ತರವಾಗಿದೆ. ಈ ರಸ್ತೆ ಸುಮಾರು ಎರಡು ಕಿಲೋ ಮೀಟರ್ ದೂರ ಕೊಲ್ಲಮೊಗ್ರದಿಂದ ಬೆಂಡೋಡಿಯೋವರೆಗೆ ಸರಕಾರ ವಿಶೇಷ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಪಡಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ದಿನೇಶ್ ಹಾಲೆಮಜಲುರವರು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಂಡಿರುತ್ತಾರೆ.
ಈ ಭಾಗದಲ್ಲಿ ಸರಕಾರಿ ಶಾಲೆ, ಕೊರಗರ ಕಾಲೋನಿ ಸೇರಿದಂತೆ ಅನೇಕ ಜಾತಿ ಮತ್ತು ಪಂಗಡದವರ ಮನೆಗಳು ಇವೆ. ಅವರೆಲ್ಲ ಪೇಟೆ ಪಟ್ಟಣಗಳಿಗೆ ಹೋಗಿ ಬರಲು ಇದೇ ಪ್ರಮುಖ ರಸ್ತೆಯಾಗಿ ಅವಲಂಬಿಸಿರುತ್ತಾರೆ. ಇತ್ತೀಚೆಗೆ ಸುರಿದ ಮಳೆಗೆ ಸೇತುವೆಯ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದ್ದಲ್ಲದೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಎಲ್ಲಾ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಜನ ಸಂಚಾರ ಸೇರಿ ವಾಹನ ಸಂಚಾರ ಕೂಡ ದುಸ್ತರವಾಗಿದೆ. ಈ ರಸ್ತೆಯ ಶಾಶ್ವತ ಅಭಿವೃದ್ಧಿಗಾಗಿ ಸರಕಾರ ವಿಶೇಷ ಪ್ಯಾಕೇಜ್ ನೀಡಿ ಅನುದಾನ ಒದಗಿಸಿ ಕೊಟ್ಟು ಅಭಿವೃದ್ಧಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯನ್ನು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ ರವರಿಗೆ ಹಾಗೂ ದ.ಕ. ಜಿಲ್ಲಾಧಿಕಾರಿರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.