ಆ.14 : ಕರಿಕೆಯಲ್ಲಿ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆ

0

ಕ್ಯಾಂಪ್ಕೊ ಸಂಸ್ಥೆಯು ಅಡಿಕೆ ಬೆಳೆಗಾರರ ವಿಚಾರ ವಿನಿಮಯಕ್ಕಾಗಿ ನಡೆಸುತ್ತಿರುವ ಸದಸ್ಯ ಬೆಳೆಗಾರರ ಸಭೆ ಈ ಬಾರಿ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಹಭಾಗಿತ್ವದೊಂದಿಗೆ ಕರಿಕೆಯಲ್ಲಿ ನಡೆಯಲಿದೆ.

ಆ.14ರಂದು ಪೂರ್ವಾಹ್ನ 10.00 ಗಂಟೆಗೆ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಭಾಂಗಣದಲ್ಲಿ ನಡೆಯಲಿದ್ದು, ಈ ಸಭೆಯನ್ನು ಕ್ಯಾಂಪ್ಕೊ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದು , ಮುಖ್ಯ ಅಥಿತಿಗಳಾಗಿ ಕರಿಕೆ ಪ್ರಾ. ಕೃ. ಪ. ಸ.ನಿ. ಅಧ್ಯಕ್ಷರಾದ ಬೇಕಲ್ ಜೆ. ಶರಣ್ ಕುಮಾರ್, ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರು ಮತ್ತು ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಲಿದ್ದು, ಸದಸ್ಯ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ್ಯಾಂಪ್ಕೊ ಆಡಳಿತ ಮಂಡಳಿ ಹಾಗು ಸಿಬ್ಬಂದಿ ವರ್ಗದವರು ವಿನಂತಿಸಿಕೊಂಡಿದ್ದಾರೆ.