ಅಧ್ಯಕ್ಷೆ -ಜಾನಕಿ ಕಂದಡ್ಕ, ಉಪಾಧ್ಯಕ್ಷೆ- ಭುವನೇಶ್ವರಿ ಪದವು ಗೆಲುವು
ಎರಡು ಸ್ಥಾನ ಮಹಿಳೆಯರ ಪಾಲು
ಅಮರಮುಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ ಮೇರೆಗೆಚುನಾವಣಾಧಿಕಾರಿಗಳ ಅಧಿಸೂಚನೆಯಂತೆ ಚುನಾವಣಾ
ಪ್ರಕ್ರಿಯೆ ನಡೆಯಿತು.
ಪಂಚಾಯತ್ ನಲ್ಲಿ ಒಟ್ಟು 17 ಮಂದಿ ಸದಸ್ಯರನ್ನು ಹೊಂದಿದ್ದು ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ಅಧ್ಯಕ್ಷೆ ಪದ್ಮಪ್ರಿಯಾ ಮೇಲ್ತೋಟ ಹಾಗೂ ಉಪಾಧ್ಯಕ್ಷರಾಗಿ ಶಶಿಕಲಾ ಕೇನಡ್ಕರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
ಮುಂದಿನ ಎರಡುವರೆ ವರ್ಷಗಳ ಅವಧಿಗೆ ಚುನಾವಣೆ ನಡೆದು ಸದಸ್ಯರು ಮತ ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಶ್ರೀಮತಿ ಜಾನಕಿ ಮತ್ತು ಶ್ರೀಮತಿ ಮೀನಾಕ್ಷಿ ಚೂಂತಾರು ನೇರ ಸ್ಪರ್ಧೆ ಎದುರಿಸಿದ್ದು ಜಾನಕಿ ಕಂದಡ್ಕರವರು 13 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು. ಮೀನಾಕ್ಷಿ ಚೂಂತಾರು 3 ಮತಗಳನ್ನು ಪಡೆದರು.
ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಶೋಕ್ ಚೂಂತಾರು, ಭುವನೇಶ್ವರಿ ನಾಮಪತ್ರ ಸಲ್ಲಿದ್ದರು. ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭುವನೇಶ್ವರಿ ಯವರು 12 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ಚೂಂತಾರು 4 ಮತಗಳನ್ನು ಪಡೆದರು.
ಒಟ್ಟು 17 ಮಂದಿ ಸದಸ್ಯರು ಮತ ಚಲಾಯಿಸಿದ್ದು ಒಂದು ಮತ ಅಸಿಂಧುವಾಗಿತ್ತು.
ಚುನಾವಣೆಯಲ್ಲಿ ಪಂಚಾಯತ್ ನ
ಎಲ್ಲಾ ಸದಸ್ಯರು ಮತ ಚಲಾಯಿಸಿದ್ದರು.
ಶಿಶ್ತು ಬದ್ಧವಾಗಿ ಚುನಾವಣಾ ಪ್ರಕ್ರಿಯೆಯ ನ್ನುಚುನಾವಣಾಧಿಕಾರಿ ಇಂಜಿನಿಯರ್ ಮಣಿಕಂಠ ರವರು ನಡೆಸಿಕೊಟ್ಟರು. ಪಂ.ಪಿ.ಡಿ.ಒ ದಯಾನಂದ ಪತ್ತುಕುಂಜ ಮತ್ತು ಪಂ. ಸಿಬ್ಬಂದಿ ವರ್ಗದವರು ಸಹಕರಿಸಿದರು.